ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಜಗ್ಗು ಮಮ್ಮಿ’ ವ್ಯಂಗ್ಯಕ್ಕೆ ತಾಂಡವ್‌ಗೆ ಕಿಚ್ಚನ ಕ್ಲಾಸ್

ಬಿಗ್‌ಬಾಸ್ : Tulu Times l ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲನೇ ‘ಕಿಚ್ಚನ ಪಂಚಾಯ್ತಿ’ ಇಂದು ನಡೆಯುತ್ತಿದ್ದು ಮನೆಯೊಳಗಿನ ಮೊದಲ ವಾರದ ಘಟನೆಗಳ ಬಗ್ಗೆ ಕಿಚ್ಚ ಸುದೀಪ್ ಸ್ಪರ್ಧಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಪ್ರತಿವಾರದಂತೆ ಸ್ಪರ್ಧಿಗಳ ನಡೆ-ನುಡಿ, ತಪ್ಪು-ಒಪ್ಪುಗಳನ್ನು ಪ್ರೇಕ್ಷಕರ ಮುಂದೆ ಇಡುವುದರ ಜೊತೆಗೆ, ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಸಲಹೆಯನ್ನೂ ನೀಡುತ್ತಿದ್ದು, ಬಿಗ್‌ಬಾಸ್ ಮನೆಯ ಮೊದಲ ವಾರದಲ್ಲೇ ಹಲವು ಘಟನೆಗಳು ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ತಾಂಡವ್ ರಾಮ್ ಅವರು ಜಗ್ಗು ಮಮ್ಮಿ ಅವರನ್ನು ವ್ಯಂಗ್ಯ ಮಾಡಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ಜಗ್ಗು ಮಮ್ಮಿ ಅವರನ್ನು ಉದ್ದೇಶಿಸಿ ತಾಂಡವ್ ಮಾಡಿದ ಮಾತುಗಳು ಹಾಗೂ ಅವರ ವರ್ತನೆಗೆ ಕೆಲ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಇದೀಗ ಕಿಚ್ಚನ ಪಂಚಾಯ್ತಿಯಲ್ಲೂ ಪ್ರಸ್ತಾಪವಾಗಿದೆ. ತಾಂಡವ್ ರಾಮ್ ಅವರ ವರ್ತನೆಯನ್ನು ಸುದೀಪ್ ಪ್ರಶ್ನಿಸಿ, ಮಾತಿನ ಮಿತಿ ಹಾಗೂ ಇನ್ನೊಬ್ಬ ಸ್ಪರ್ಧಿಯ ಭಾವನೆಗಳನ್ನು ಗೌರವಿಸುವ ಅಗತ್ಯದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು, ಜಗಳಗಳು ಮತ್ತು ತಮಾಷೆಗಳು ಸಹಜ. ಆದರೆ ತಮಾಷೆಯ ಹೆಸರಿನಲ್ಲಿ ಮತ್ತೊಬ್ಬರನ್ನು ನೋಯಿಸುವ ಅಥವಾ ಅವಮಾನಿಸುವ ರೀತಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂಬ ಸಂದೇಶವನ್ನು ಸುದೀಪ್ ನೀಡಿರುತ್ತಾರೆ.

ಮೊದಲ ವಾರವೇ ತಾಂಡವ್ ರಾಮ್ ಅವರಿಗೆ ಕಿಚ್ಚನಿಂದ ಕ್ಲಾಸ್ ಸಿಕ್ಕಿರುವುದುವಾರದ ಪಂಚಾಯ್ತಿಯ ಪ್ರಮುಖ ಹೈಲೈಟ್ ಆಗಿದೆ. ಇದೇ ವೇಳೆ ಮನೆಯ ಇತರ ಸ್ಪರ್ಧಿಗಳ ನಡೆ-ನುಡಿಗಳ ಬಗ್ಗೆಯೂ ಸುದೀಪ್ ಚರ್ಚೆ ನಡೆಸಲಿದ್ದಾರೆ. ಸ್ಪರ್ಧಿಗಳು ತಮ್ಮ ತಪ್ಪುಗಳನ್ನು ಅರಿತುಕೊಂಡು ಮುಂದಿನ ವಾರಗಳಲ್ಲಿ ಹೇಗೆ ಆಟವಾಡುತ್ತಾರೆ ಎಂಬುದರ ಮೇಲೆ ವೀಕ್ಷಕರ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಸೀಸನ್ 13ರ ಮೊದಲ ಕಿಚ್ಚನ ಪಂಚಾಯ್ತಿ ಮನೆಯೊಳಗಿನ ಸಂಬಂಧಗಳು ಮತ್ತು ಸ್ಪರ್ಧಿಗಳ ಆಟದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Kiccha schools Tandav over his sarcastic ‘Jaggu Mummy’ remark – ತುಳುಟೈಮ್ಸ್

ಇದನ್ನೂ ಓದಿ :ಸ್ಕ್ರೀನ್ ಮುಂದೆ ಗಂಟೆಗಟ್ಟಲೆ ಕಳೆಯುವವರಿಗೆ ತಜ್ಞರ ಎಚ್ಚರಿಕೆ!

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/GzXRNLIiLws?feature=share

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page