ಮಂಗಳೂರು: Tulu Times l ನಗರದ ಪಂಪ್ವೆಲ್ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಜುಲೈ 26ರಂದು (ಭಾನುವಾರ) ಉಚಿತ ‘ಲಾಸಿಕ್-ಸ್ಮೈಲ್ ಮತ್ತು ಪಿಆರ್ಕೆ ಲೇಸರ್ ಕಣ್ಣಿನ ತಪಾಸಣಾ ಶಿಬಿರ’ ಆಯೋಜಿಸಲಾಗಿದೆ.
ಶಿಬಿರವು ಆಸ್ಪತ್ರೆಯ ಮಂಗಳೂರು ಕೇಂದ್ರದಲ್ಲಿ ಬೆಳಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದೆ. ಕನ್ನಡಕ ಅಥವಾ ಕಾಂಟಾಕ್ಟ್ ಲೆನ್ಸ್ ಬಳಕೆಯಿಂದ ಮುಕ್ತಿ ಹೊಂದಲು ಬಯಸುವವರಿಗೆ ಈ ಶಿಬಿರ ಉತ್ತಮ ಅವಕಾಶವಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. 18ರಿಂದ ಸುಮಾರು 50 ವರ್ಷ ವಯಸ್ಸಿನವರಿಗೆ ಸೂಕ್ತವಾಗಿರುವ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ದೃಷ್ಟಿ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಚಿಕಿತ್ಸೆಯು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳಲಿದ್ದು, ನೋವುರಹಿತವಾಗಿರುವುದರ ಜೊತೆಗೆ ಚಿಕಿತ್ಸೆ ಬಳಿಕ ರೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬಹುದು ಎಂದು ಆಸ್ಪತ್ರೆ ತಿಳಿಸಿದೆ.

ಉಚಿತ ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರಗಳ ಪರೀಕ್ಷೆ, ಕಾರ್ನಿಯಾ ಟೋಪೋಗ್ರಫಿ ಸ್ಕ್ಯಾನ್ ಸೇರಿದಂತೆ ಲೇಸರ್ ಶಸ್ತ್ರಚಿಕಿತ್ಸೆಗೆ ಮುನ್ನ ಅಗತ್ಯವಿರುವ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ತಪಾಸಣೆಯ ಬಳಿಕ ಚಿಕಿತ್ಸೆಗೆ ಅರ್ಹರೆಂದು ವೈದ್ಯರು ನಿರ್ಧರಿಸಿದ ರೋಗಿಗಳಿಗೆ ಲೇಸರ್ ಚಿಕಿತ್ಸೆಯ ಮೇಲೆ ಶೇಕಡಾ 50ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಕನ್ನಡಕ ಅಥವಾ ಕಾಂಟಾಕ್ಟ್ ಲೆನ್ಸ್ಗೆ ಪರ್ಯಾಯ ಚಿಕಿತ್ಸೆಯನ್ನು ಬಯಸುವವರು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಸಾರ್ವಜನಿಕರು 9513726565 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಸಾದ್ ನೇತ್ರಾಲಯದ ವರದಿಯಲ್ಲಿ ತಿಳಿಸಲಾಗಿದೆ.
Free eye check-up camp at Prasad Netralaya on July 26 – ತುಳು ಟೈಮ್ಸ್
ಇದನ್ನೂ ಓದಿ : ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದಲ್ಲಿ ಜುಲೈ 25ರಂದು ಶಾಲೆಗಳಿಗೆ ರಜೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/QymeOgHg8W8











