ಬೆಳ್ತಂಗಡಿ: ತುಳುಟೈಮ್ಸ್: ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಆಗಸ್ಟ್ 9ರಂದು ಪಾಣೆಮಂಗಳೂರು ನದಿ ತೀರದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಿರುವ ಹಿರಿಯರ ಚಿಂತನ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯರು ಉಜಿರೆ ಜನಾರ್ದನ ದೇವಸ್ಥಾನ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.
ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಸಂಗ್ರಹಿಸಿ ಪ್ರಕಟಿಸಿದ ಹಿರಿಯ ನಾಗರಿಕರ ಅಭಿಯಾನ ಸಂದೇಶ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಹಿರಿಯರ ಚಿಂತನ ಸಮಾವೇಶದಲ್ಲಿ 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಭಾಗವಹಿಸಲು ಅವಕಾಶವಿದೆಯೆಂದು ತಿಳಿಸಿದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಸ್ವಾಮಿಗಳ 6ನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶಿಷ್ಯ ವೃಂದದವರು ಭಾಗವಹಿಸಬೇಕೆಂದು ತಿಳಿಸಿದರು. ಈ ಬಗ್ಗೆ ಸಭೆ ನಡೆಸಿ ಸಹಕಾರ ನೀಡುವುದಾಗಿ ಶ್ರೀ ಶರತ್ ಕೃಷ್ಣ ಅವರು ತಿಳಿಸಿದರು. ಉಭಯ ಕಾರ್ಯಕ್ರಮಗಳಿಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಘಟಕದ ಪದಾಧಿಕಾರಿಗಳು ಪ್ರಯತ್ನಿಸಬೇಕೆಂದು ಬಿ.ಭುಜಬಲಿ ಧರ್ಮಸ್ಥಳ ತಿಳಿಸಿದರು
ಹಿರಿಯರ ಸೇವಾ ಪ್ರತಿಷ್ಠಾನ ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ, ಪ್ರತಿಷ್ಠಾನದ ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಖಜಾಂಜಿ ಅನಾರು ಕೃಷ್ಣಶರ್ಮ, ವಿಶ್ವಾಸ ರಾವ್, ಕುಸುಮಾವತಿ ಬೆಳ್ತಂಗಡಿ, ಶಾಂತ ಶೆಟ್ಟಿ ಧರ್ಮಸ್ಥಳ ಉಪಸ್ಥಿತರಿದ್ದರು.ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಗಣೇಶ್ ಭಟ್ ಕುತ್ರೋಟ್ಟು ಧನ್ಯವಾದ ಅರ್ಪಿಸಿದರು
Belthangady: Invitation brochure for the Ujire Seniors' Thought Forum released.tulutimesಇದನ್ನೂ ಓದಿ:ರಾತ್ರಿ ವೇಳೆ ಬಟ್ಟೆ ಒಗೆಯುವುದು ಅಥವಾ ಒಣಗಿಸುವುದು ಒಳ್ಳೆಯದಲ್ಲವೇ? ವಿಜ್ಞಾನ ಏನು ಹೇಳುತ್ತದೆ?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/@tulutimess











