ಬ್ರೇಕಿಂಗ್ ನ್ಯೂಸ್
ಸುಳ್ಯ

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಂದವಾದ ಬರೆವಣಿಗೆ ಕಾರ್ಯಗಾರಕ್ಕೆ ಉತ್ತಮ ಸ್ಪಂದನೆ

ಸುಳ್ಯ: Tulu Times l ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜುಲೈ 15ರಂದು ಅಂದವಾದ ಬರವಣಿಗೆ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಖ್ಯಾತ ಶಿಕ್ಷಣ ತಜ್ಞ ಜಿ.ಕೆ. ವೆಂಕಟೇಶಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೌಂದರ್ಯ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ನಮ್ಮ ಕೈಬರಹವೂ ಸೌಂದರ್ಯದಿಂದ ಕೂಡಿರಬೇಕು. ಕೈಬರಹ ಎಂದರೆ ಕೇವಲ ಕೈಯ ಕೆಲಸವಲ್ಲ; ಕೈ, ಮನಸ್ಸು, ಮೆದುಳು ಹಾಗೂ ಕ್ರಿಯಾಶೀಲ ನರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಸುಂದರವಾದ ಅಕ್ಷರಗಳು ಮೂಡುತ್ತವೆ. ಅಕ್ಷರಗಳ ಪ್ರತಿಯೊಂದು ಭಾಗಕ್ಕೂ ಅದರದ್ದೇ ಆದ ಸೌಂದರ್ಯವಿದ್ದು, ಆಗಲೇ ಅದು ‘ಸರ್ವಾಂಗ ಸುಂದರ’ವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಶಾಲೆಯ ಅಧ್ಯಕ್ಷರು ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ, ಜಿ.ಕೆ. ವೆಂಕಟೇಶಮೂರ್ತಿಯವರು ಚೈತನ್ಯಪೂರ್ಣ ವ್ಯಕ್ತಿತ್ವ ಹೊಂದಿದ್ದು, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ವಿಶೇಷ ಶಾಲೆಯನ್ನು ಸ್ಥಾಪಿಸಿ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಬದುಕನ್ನು ರೂಪಿಸಿರುವ ಮಹನೀಯರು ಎಂದು ಪ್ರಶಂಸಿಸಿದರು.

 

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿ ಅಂದವಾದ ಬರವಣಿಗೆಯ ಮಹತ್ವದ ಕುರಿತು ಮಾಹಿತಿ ಪಡೆದು ಕಾರ್ಯಗಾರದ ಪ್ರಯೋಜನ ಪಡೆದುಕೊಂಡರು.

ಶಾಲೆಯ ಮುಖ್ಯ ಶಿಕ್ಷಕರಾದ ದೇವಿಪ್ರಸಾದ್ ಜಿ.ಸಿ. ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು.

Excellent response to the beautiful handwriting workshop at Sneha Educational Institution – ತುಳುಟೈಮ್ಸ್

ಇದನ್ನೂ ಓದಿ :‘ವಂದೇ ಮಾತರಂ’ ಗೌರವಕ್ಕೆ ಕಾನೂನಿನ ಕವಚ; ಸಂಸತ್‌ನಲ್ಲಿ ಹೊಸ ಮಸೂದೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/Us8g81jS5g4?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page