ಕರ್ನಾಟಕ : Tulu Times l ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನ ವೇಗ ಪಡೆದುಕೊಂಡಿದ್ದು, ರಾಜ್ಯದ 5 ಕೋಟಿಗೂ ಅಧಿಕ ಮತದಾರರಲ್ಲಿ ಈಗಾಗಲೇ 81 ಶೇಕಡಾ ಮಂದಿಗೆ ಗಣತಿ ಫಾರ್ಮ್‌ಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ರಾಜ್ಯದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ 100 ಶೇಕಡಾ ಫಾರ್ಮ್ ವಿತರಣೆ ಪೂರ್ಣಗೊಂಡಿದೆ. ಮತದಾರರು ಜುಲೈ 29ರೊಳಗೆ ಫಾರ್ಮ್ ಭರ್ತಿ ಮಾಡಿ ಸಲ್ಲಿಸುವುದರ ಜೊತೆಗೆ ತಮ್ಮ ಹೆಸರು, ವಿಳಾಸ ಅಥವಾ ಇತರೆ ಮಾಹಿತಿಯಲ್ಲಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಬಿಎಲ್‌ಒಗಳ ವಿರುದ್ಧ ಕ್ರಮ ;
ಕೆಲವೆಡೆ ಫಾರ್ಮ್‌ಗಳನ್ನು ಗುಂಪು ಗುಂಪಾಗಿ ವಿತರಿಸಲಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 59,050 ಬೂತ್ ಮಟ್ಟದ ಅಧಿಕಾರಿಗಳ ಪೈಕಿ ದೂರು ಬಂದ ಪ್ರಕರಣಗಳನ್ನು ಪರಿಶೀಲಿಸಿ 35ಕ್ಕೂ ಹೆಚ್ಚು ಬಿಎಲ್‌ಒಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ಫಾರ್ಮ್ ಸಲ್ಲಿಸಿರುವ ಮತದಾರರು ಬಯಸಿದರೆ ಭೌತಿಕ ಪ್ರತಿಯನ್ನೂ ಸಲ್ಲಿಸಬಹುದು. ಎರಡೂ ಅರ್ಜಿಗಳನ್ನು ಸ್ವೀಕರಿಸುವುದು ಬಿಎಲ್‌ಒಗಳ ಕರ್ತವ್ಯವಾಗಿದ್ದು, ನಿರಾಕರಿಸಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರಡು ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ;
2002ರ ದಾಖಲೆಗಳಲ್ಲಿ ಮಾಹಿತಿ ವ್ಯತ್ಯಾಸ ಕಂಡುಬಂದರೂ, ಮತದಾರರು ಫಾರ್ಮ್ ಸಲ್ಲಿಸಿದರೆ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ನಂತರ ದಾಖಲೆಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ತಿದ್ದುಪಡಿ ಪ್ರಕ್ರಿಯೆ ನಡೆಸಲಾಗುತ್ತದೆ. ಮತದಾರರ ಅನುಮತಿ ಇಲ್ಲದೆ ಯಾವುದೇ ಮಾಹಿತಿಯನ್ನು ಬದಲಾಯಿಸುವ ಅಧಿಕಾರ ಬಿಎಲ್‌ಒಗಳಿಗೆ ಇಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 5ರಿಂದ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಫಾರ್ಮ್–ಎ ಮೂಲಕ ಸಲ್ಲಿಸಬೇಕಾಗುತ್ತದೆ. ಮತದಾರರು ಜುಲೈ 29ರೊಳಗೆ ಸರಿಯಾದ ಮಾಹಿತಿಯೊಂದಿಗೆ ಫಾರ್ಮ್ ಸಲ್ಲಿಸಿ, ತಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
SIR campaign gains momentum: 81% of census forms distributed to 5 crore voters.- ತುಳುಟೈಮ್ಸ್
ಇದನ್ನೂ ಓದಿ :A4 ಪೇಪರ್‌ನಿಂದ ಫ್ರಿಡ್ಜ್ ಟೆಸ್ಟ್! ವಿದ್ಯುತ್ ಬಿಲ್ ಉಳಿಸುವ ಸುಲಭ ಉಪಾಯ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/IxMN_7_lQXA?feature=share











