ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇಲ್ಲಿ ದೇವರುಗಳಿಗೆ ನಡೆಯುತ್ತೆ ನಿಶ್ಚಿತಾರ್ಥ : ಎರಡು ದಿನಗಳ ಬಳಿಕ ಫಲಪೂಜಾ ಮಹೋತ್ಸವ

ಹಂಪಿ : Tulu Times | ಈ ದೇವಾಲಯದಲ್ಲಿ ದೇವರಿಗೆ ನಿಶ್ಚಿತಾರ್ಥವಾಗುತ್ತದೆ. ಹಂಪಿಯಲ್ಲಿ ಪಂಪಾ, ವಿರೂಪಾಕ್ಷ ದೇವರ ನಿಶ್ಚಿತಾರ್ಥವು ಅತ್ಯಂತ ಪವಿತ್ರ ಮತ್ತು ವೈಶಿಷ್ಟ್ಯಪೂರ್ಣ ಆಚರಣೆಯಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ನಡೆದು ಬರುತ್ತಿರುವ ದೈವಿಕ ಸಂಸ್ಕೃತಿ ಮತ್ತು ಹಂಪಿಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಭಾಗವಾಗಿದೆ.

ವಿರೂಪಾಕ್ಷ ದೇವರು ಹಾಗೂ ಪಂಪಾ ದೇವಿ ನಡುವೆ ನಡೆದ ದೈವಿಕ ವಿವಾಹ ;

ಪಂಪಾ ಸರೋವರ ಪ್ರದೇಶ ಹಂಪಿಯ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಇಲ್ಲಿ ದೇವಿ ತಪಸ್ಸು ಮಾಡಿ ಶಿವನನ್ನು ಪತಿಯಾಗಿ ಪಡೆದಳು ಎಂಬ ಪೌರಾಣಿಕ ನಂಬಿಕೆ ಇದೆ. ಜೊತೆಗೆ, ವಿರೂಪಾಕ್ಷ ದೇವರು ಹಾಗೂ ಪಂಪಾ ದೇವಿ ನಡುವೆ ನಡೆದ ದೈವಿಕ ವಿವಾಹವನ್ನು ಸ್ಮರಿಸುವ ಉತ್ಸವವನ್ನು ನಿಶ್ಚಿತಾರ್ಥ ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ನಮ್ಮಲ್ಲಿ ನಡೆಯುವ ಮದುವೆ ಕ್ರಮದಂತೆ, ಪೂಜೆ, ಮೆರವಣಿಗೆ ಇತ್ಯಾದಿ ಎಲ್ಲವೂ ನಡೆಯಿತು. ಈ ವಿಶಿಷ್ಟ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ವಿಜಯನಗರ, ಬಳ್ಳಾರಿ, ಕೊಪ್ಪಳ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೊಸಪೇಟೆ ಹಾಗೂ ಹಂಪಿ ಪೊಲೀಸರ ವತಿಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಉತ್ತರ ಕರ್ನಾಟಕ ಭಾಗದಲ್ಲಿಯೇ ಫಲಪೂಜಾ ಮಹೋತ್ಸವ ವಿಶೇಷ ;

ನಾವು ಹೇಗೆ ಮದುವೆಯಾದಾಗ ಮೆರವಣಿಗೆ ಮಾಡುತ್ತೇವೆಯೋ ಅದೇ ರೀತಿ ಇಲ್ಲಿ ತೆಪ್ಪದಲ್ಲಿ ಮೆರವಣಿಗೆ ಮಾಡುತ್ತೇವೆ. ಇದಾದ ಎರಡು ದಿನಗಳ ಬಳಿಕ ಫಲಪೂಜಾ ಮಹೋತ್ಸವ ನಡೆಯಲಿದೆ. ಮನ್ಮಥ ಕುಂಡದಲ್ಲಿ ತೆಪೋತ್ಸವ ನೆರವೇರಿಸಲಾಗುತ್ತದೆ. ಇದು ಸ್ಥಳೀಯರಿಗೆ ಸಂಭ್ರಮದ ಹಬ್ಬದ ದಿನವಾಗಿರುತ್ತದೆ. ಹಂಪಿ ಅರ್ಚಕ ಟಿ. ಶ್ರೀನಿವಾಸ್ ಮಾತನಾಡಿ, ಮನ್ಮಥನ ದಹನ ಮಾಡಿರುವ ಜಾಗ ಇದು. ಕಾರ್ತಿಕ ಶುದ್ಧ ಹುಣ್ಣಿಮೆ ದಿನ ತನ್ನ ಮೂರನೇ ಕಣ್ಣೀನಿಂದ ಮನ್ಮಥನ ದಹನ ಆಗುತ್ತೆ. ಇದಾದ ಬಳಿಕ ವಿರೂಪಾಕ್ಷ ಸ್ವಾಮಿ, ಪಂಪಾದೇವಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತದೆ. ಇದನ್ನು ನಾವು ಫಲಪೂಜಾ ಮಹೋತ್ಸವ ಎಂದು ಕರೆಯುತ್ತೇವೆ ಎಂದು ವಿವರಿಸಿದ್ದಾರೆ. ಹಂಪಿಯಲ್ಲಿ ನಡೆದ ವಿಶೇಷ ಮಹೋತ್ಸವದಲ್ಲಿ ವಿದೇಶಿಗರು ಪಾಲ್ಗೊಂಡಿದ್ದು, ಈಡೀ ಉತ್ತರ ಕರ್ನಾಟಕ ಭಾಗದಲ್ಲಿಯೇ ಫಲಪೂಜಾ ಮಹೋತ್ಸವ ವಿಶೇಷವಾಗಿದೆ. ಸಾವಿರಾರು ಭಕ್ತರು ಭಾಗವಹಿಸಿ ಉತ್ಸವ ಕಣ್ತುಂಬಿಕೊಂಡಿದ್ದಾರೆ.

The engagement ceremony for the gods takes place here: Two days later, the festival of fruit worship takes place – ತುಳು ಟೈಮ್ಸ್

ಇದನ್ನೂ ಓದಿ :ಬಿಗ್‌ ಬಾಸ್‌ ಗಿಲ್ಲಿ ನಟಿಸಿದ ಸರ್ಕಾರಿ ಶಾಲೆ-H 8 ಚಿತ್ರದ ಪೋಸ್ಟರ್ ಬಿಡುಗಡೆ.. ಹೆಚ್ಚಿದ ಗಿಲ್ಲಿ ಫಾಲೋವರ್ಸ್!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page