ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಮಲ್ ಏಲಕ್ಕಿ ಜಾಹೀರಾತು ವಿವಾದ: ಬಾಲಿವುಡ್ ನಟರಿಗೆ ಎಫ್‌ಡಿಎ ನೋಟಿಸ್

ವಿಮಲ್ : Tulu Times l ವಿಮಲ್ ಏಲಕ್ಕಿ ಸಂಸ್ಥೆಯ ಬ್ರ್ಯಾಂಡ್ ರಾಯಭಾರಿಗಳಾಗಿರುವ ಬಾಲಿವುಡ್‌ನ ಪ್ರಸಿದ್ಧ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ ‘ಪಿಬಿ ಆಗ್ರೋ’ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಮಹಾರಾಷ್ಟ್ರದಲ್ಲಿ ನಿಷೇಧಿತವಾಗಿರುವ ‘ವಿಮಲ್ ಪಾನ್ ಮಸಾಲಾ’ ಉತ್ಪನ್ನಕ್ಕೆ ‘ವಿಮಲ್ ಏಲಕ್ಕಿ’ ಜಾಹೀರಾತಿನ ಮೂಲಕ ಪರೋಕ್ಷ ಪ್ರಚಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಎಫ್‌ಡಿಎ ಮೂವರೂ ನಟರಿಗೆ ನೋಟಿಸ್ ನೀಡಿದ್ದು, ಜಾಹೀರಾತು ಪ್ರಸಾರ ತಡೆಯುವಂತೆ ಸೂಚಿಸಿತ್ತು.

ಸಂಸ್ಥೆಯ ವಾದ:
ಪಿಬಿ ಆಗ್ರೋ ಸಂಸ್ಥೆಯ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿ, “ಕೇವಲ ಏಲಕ್ಕಿ ಉತ್ಪನ್ನದ ಪ್ರಚಾರಕ್ಕಷ್ಟೇ ನಟರನ್ನು ಒಪ್ಪಂದ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ 2001ರಿಂದಲೇ ವಿಮಲ್ ಪಾನ್ ಮಸಾಲಾ ಉತ್ಪಾದನೆ ಅಥವಾ ಮಾರಾಟವಿಲ್ಲ. ಅಲ್ಲದೆ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ತಂಬಾಕುಯುಕ್ತ ಪಾನ್ ಮಸಾಲಾ ದೇಶಾದ್ಯಂತ ನಿಷೇಧಕ್ಕೊಳಗಾಗಿದೆ. ಹೀಗಿರುವಾಗ ಪರೋಕ್ಷ ಜಾಹೀರಾತಿನ ಆರೋಪ ನಿರಾಧಾರ” ಎಂದು ಹೇಳಿದ್ದಾರೆ. ಕಂಪನಿಗೆ ಯಾವುದೇ ವಿಚಾರಣೆಯ ಅವಕಾಶ ನೀಡದೆ, ಏಕಾಏಕಿ ನಟರಿಗೆ ನೋಟಿಸ್ ಕಳುಹಿಸಿರುವುದು ಕಾನೂನುಬಾಹಿರ ಎಂದಿದ್ದಾರೆ.

ಕೇಂದ್ರ ಹಾಗೂ ಎಫ್‌ಡಿಎ ವಾದ:
ಕೇಂದ್ರ ಸರ್ಕಾರ ಹಾಗೂ ಕೇಂದ್ರೀಯ ಗ್ರಾಹಕ ರಕ್ಷಣೆ ಪ್ರಾಧಿಕಾರ ಪರ ವಕೀಲರು, ಈ ನೋಟಿಸ್ ನೀಡಿರುವುದು ಮಹಾರಾಷ್ಟ್ರ ಸರ್ಕಾರವಾಗಿರುವುದರಿಂದ, ಈ ಅರ್ಜಿಯ ವಿಚಾರಣೆ ಮುಂಬೈ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆಯೇ ಹೊರತು ದೆಹಲಿ ಹೈಕೋರ್ಟ್ ವ್ಯಾಪ್ತಿಗಲ್ಲ ಎಂದು ವ್ಯಾಪ್ತಿಯ ಪ್ರಶ್ನೆ ಎತ್ತಿದ್ದಾರೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿದೆ.

Vimal Cardamom Advertisement Controversy: FDA Notice to Bollywood Actors – ತುಳು ಟೈಮ್ಸ್

ಇದನ್ನೂ ಓದಿ : ಪಟಾಕಿ ಬಳಕೆಗೆ ಸರ್ಕಾರದಿಂದ ಹೊಸ ರೂಲ್ಸ್: ನಿಯಮ ಮೀರಿದರೆ ಕ್ರಿಮಿನಲ್ ಕೇಸ್!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page