ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್ ಬಾಸ್ 13: ಕುತೂಹಲ ಹೆಚ್ಚಿಸಿದ ಸ್ಪರ್ಧಿಗಳ ಲಿಸ್ಟ್!

ಬಿಗ್ ಬಾಸ್ : Tulu Times l ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 13 ನಾಳೆ ಆರಂಭವಾಗಲಿದೆ. ಹೊಸ ಸೀಸನ್‌ ಆರಂಭಕ್ಕೂ ಮುನ್ನವೇ ಪ್ರೋಮೋಗಳ ಮೂಲಕ ಕೆಲವು ಸ್ಪರ್ಧಿಗಳ ಹೆಸರುಗಳು ಹಾಗೂ ಸುಳಿವುಗಳು ಹೊರಬಿದ್ದಿದ್ದು, ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿರುವ ಸೆಲೆಬ್ರಿಟಿಗಳು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

ಈ ಬಾರಿ ಕಿರುತೆರೆ, ಸಿನಿಮಾ, ಸಂಗೀತ ಹಾಗೂ ಹಾಸ್ಯ ಕ್ಷೇತ್ರದ ಹಲವು ಪ್ರತಿಭೆಗಳು ಬಿಗ್‌ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ನಟಿ ಸೋನಿ ಮುಲೆವಾ, ಗಾಯಕಿ ಅನನ್ಯಾ ಅಮರ್, ಸೌಂದರ್ಯಾ ಶೆಟ್ಟಿ ಹಾಗೂ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ಖ್ಯಾತಿಯ ಆಸಿಯಾ ಫಿರ್ದೋಸ್ ಹೆಸರುಗಳು ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ.  ಇದರ ಜೊತೆಗೆ ನಟಿ ಸಂಗೀತಾ ಭಟ್, ಆಸಿಯಾ ಬೇಗಂ, ‘ಭೀಮ’ ಚಿತ್ರದ ಮೂಲಕ ಗಮನ ಸೆಳೆದ ಡ್ರಾಗನ್ ಮಂಜು ಕೂಡ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ನಟಿಸಿದ್ದ ಜಗ್ಗ ಮಮ್ಮಿ ಅವರ ಹೆಸರು ಕೂಡ ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಹಾಸ್ಯ ಕ್ಷೇತ್ರದಿಂದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ ಅವರು ಬಿಗ್‌ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ನಟ ತಾಂಡವ್ ರಾಮ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ.‌ ಪ್ರೋಮೋಗಳಲ್ಲಿ ಕಾಣಿಸಿಕೊಂಡಿರುವ ಸುಳಿವುಗಳ ಆಧಾರದ ಮೇಲೆ ಈ ಹೆಸರುಗಳು ಹರಿದಾಡುತ್ತಿದ್ದು, ಅಧಿಕೃತವಾಗಿ ಯಾರೆಲ್ಲಾ ಸ್ಪರ್ಧಿಗಳು ಎಂಬುದು ಕಾರ್ಯಕ್ರಮದ ಆರಂಭದ ವೇಳೆ ಸ್ಪಷ್ಟವಾಗಲಿದೆ. ಹೊಸ ಮುಖಗಳು, ವಿಭಿನ್ನ ಕ್ಷೇತ್ರಗಳ ಸೆಲೆಬ್ರಿಟಿಗಳು ಮತ್ತು ವೈವಿಧ್ಯಮಯ ವ್ಯಕ್ತಿತ್ವಗಳೊಂದಿಗೆ ಈ ಬಾರಿ ಬಿಗ್‌ಬಾಸ್ ಮನೆ ಮತ್ತಷ್ಟು ರೋಚಕವಾಗುವ ನಿರೀಕ್ಷೆಯಿದೆ.

ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ಬಳಿಕ ಸ್ಪರ್ಧಿಗಳ ನಡುವಿನ ಸ್ನೇಹ, ಪೈಪೋಟಿ, ಭಿನ್ನಾಭಿಪ್ರಾಯ, ಟಾಸ್ಕ್‌ಗಳು ಹಾಗೂ ಮನರಂಜನೆ ಪ್ರೇಕ್ಷಕರ ಗಮನ ಸೆಳೆಯಲಿವೆ. ಹೀಗಾಗಿ ಬಿಗ್ ಬಾಸ್ 13ರ ಮೊದಲ ದಿನವೇ ಯಾರು ಅಧಿಕೃತವಾಗಿ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದೇ ಇದೀಗ ಅಭಿಮಾನಿಗಳ ದೊಡ್ಡ ಕುತೂಹಲವಾಗಿದೆ.

Bigg Boss 13: List of contestants sparks curiosity – ತುಳುಟೈಮ್ಸ್

ಇದನ್ನೂ ಓದಿ :ಮಣ್ಣಿನಡಿ ಅಡಗಿತ್ತು ಚಿನ್ನದ ನಿಧಿ ; ಚಿನ್ನದ ನಾಣ್ಯ ನೋಡಿ ಅಧಿಕಾರಿಗಳೇ ಅಚ್ಚರಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/GzXRNLIiLws?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page