ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಒಂದು ದಿನದ ಗುರುಜ್ಞಾನ, ಸಾವಿರ ದಿನಗಳ ಓದಿಗಿಂತ ಶ್ರೇಷ್ಠ

ಶಿಕ್ಷಕರು : Tulu Times l ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಜೀವನದ ಮೌಲ್ಯಗಳನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವೇ ಶಿಕ್ಷಕರ ದಿನಾಚರಣೆ. ಪ್ರತಿವರ್ಷ ಸೆಪ್ಟೆಂಬರ್ 5ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಶುಭಾಶಯಗಳನ್ನು ಸಲ್ಲಿಸುವ ಮೂಲಕ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.

ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುವವರಲ್ಲ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಉತ್ತಮ ನಾಗರಿಕರಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸದಾಕಾಲ ಆದರ್ಶಗಳನ್ನು ಬೋಧಿಸುತ್ತಾ, ತಾವೇ ಆದರ್ಶ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ಜೀವನ ರೂಪಿಸಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ಶಿಕ್ಷಕರ ಸೇವೆ ಅಮೂಲ್ಯವಾಗಿದೆ.

‘ಮನೆಯೇ ಮೊದಲ ಪಾಠಶಾಲೆ, ತಂದೆ-ತಾಯಂದಿರೇ ಮಗುವಿನ ಮೊದಲ ಗುರುಗಳು’ ಎಂಬ ಮಾತು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಅರ್ಥ ಪಡೆದುಕೊಳ್ಳುತ್ತದೆ. ಮಗುವಿನ ಜೀವನದ ಆರಂಭಿಕ ಹಂತದಲ್ಲೇ ತಂದೆ-ತಾಯಿ ಉತ್ತಮ ಸಂಸ್ಕಾರ, ನಡತೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ನಂತರ ಶಾಲೆಯಲ್ಲಿ ಶಿಕ್ಷಕರು ಆ ಜ್ಞಾನವನ್ನು ಮತ್ತಷ್ಟು ಬೆಳೆಸಿ, ವಿದ್ಯಾರ್ಥಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಾರೆ. ಹೀಗಾಗಿ ಜೀವನದ ಪಾಠ ಕಲಿಸಿದ ಪ್ರತಿಯೊಬ್ಬ ಗುರುವನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.

‘ಸಾವಿರ ದಿನಗಳ ಸುದೀರ್ಘ ಓದಿಗಿಂತಲೂ, ಶ್ರೇಷ್ಠ ಶಿಕ್ಷಕರ ಜೊತೆ ಕಳೆದ ಒಂದು ದಿನದಿಂದ ದೊರೆಯುವ ಜ್ಞಾನವೇ ಲೇಸು’ ಎಂಬ ಮಾತು ಶಿಕ್ಷಕರ ಮಹತ್ವವನ್ನು ಸಾರುತ್ತದೆ. ಒಬ್ಬ ಉತ್ತಮ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಯ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಕರಿಗೆ ಗೌರವ ಸಮರ್ಪಿಸಲಾಗುತ್ತದೆ. ವಿದ್ಯಾರ್ಥಿಗಳು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶುಭಾಶಯಗಳ ಮೂಲಕ ತಮ್ಮ ಗುರುಗಳ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಾರೆ.

One day of a Guru’s wisdom is superior to a thousand days of reading – ತುಳುಟೈಮ್ಸ್

ಇದನ್ನೂ ಓದಿ :ಹಣ, ಅದೃಷ್ಟ, ಯಶಸ್ಸು: ಫೋನ್ ಕವರ್‌ನಲ್ಲಿರಲಿ ಈ ಎಲೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/EAlZlYPZOZI

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page