ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮ ವೋಟರ್ ಹೆಸರು ಕಟ್ ಆಗಿದೆಯಾ? ಆ.24ಕ್ಕೆ ಸಿಗಲಿದೆ ಉತ್ತರ

ಬೆಂಗಳೂರು: Tulu Times l ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಇದೀಗ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ಮತ್ತು ಎಣಿಕೆ ನಮೂನೆಗಳ ಸ್ವೀಕಾರ ಕಾರ್ಯ ಆಗಸ್ಟ್ 17ರಂದು ಮುಕ್ತಾಯಗೊಂಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಮತದಾರರ ವಿವರಗಳನ್ನು ಪರಿಶೀಲಿಸಿ, ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಹೆಸರುಗಳು ಸೇರಿದಂತೆ ವಿವಿಧ ಕಾರಣಗಳಿಂದ ASDDO ಪಟ್ಟಿಗೆ ಸೇರಿದವರ ಮಾಹಿತಿಯನ್ನು ಮರುಪರಿಶೀಲಿಸಲಾಗಿದೆ. ಆಗಸ್ಟ್ 17ರ ರಾತ್ರಿ 11.59ರವರೆಗೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ASDDO ಪಟ್ಟಿಯನ್ನು ನವೀಕರಿಸಲಾಗಿದೆ.

Process to purchase 15,000 new buses set in motion: Transport Minister Byrathi Suresh
Credit to original source

ಹೆಸರು ಡಿಲೀಟ್ ಆಗುತ್ತದೆಯೇ?

SIR ಪ್ರಕ್ರಿಯೆಯಲ್ಲಿ ASDDO ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ತಕ್ಷಣವೇ ವೋಟರ್ ID ರದ್ದಾಗುವುದಿಲ್ಲ. ಆದರೆ, ಅಗತ್ಯ ಪರಿಶೀಲನೆ ಪೂರ್ಣಗೊಳ್ಳದ ಅಥವಾ ಸಹಿ ಮಾಡಿದ ಎಣಿಕೆ ನಮೂನೆಯನ್ನು ಸಲ್ಲಿಸದ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ. ನಂತರ ನಿಗದಿತ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ.

ಆಗಸ್ಟ್ 24ರಂದು ಕರಡು ಪಟ್ಟಿ ಪ್ರಕಟವಾದ ಬಳಿಕ, ಸೆಪ್ಟೆಂಬರ್ 23ರವರೆಗೆ ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿ ತಪ್ಪಿದ್ದರೆ ಹಕ್ಕು ಅಥವಾ ಆಕ್ಷೇಪಣೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲು ವೇಳಾಪಟ್ಟಿ ನಿಗದಿಯಾಗಿದೆ.

ತಮ್ಮ ಹೆಸರು ಇದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ;

ಹೀಗಾಗಿ ಮತದಾರರು ಆತಂಕಪಡುವ ಬದಲು ಆಗಸ್ಟ್ 24ರಂದು ಪ್ರಕಟವಾಗುವ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಹೆಸರು ಇಲ್ಲದಿದ್ದರೆ ಅಥವಾ ವಿವರಗಳಲ್ಲಿ ತಪ್ಪಿದ್ದರೆ ಚುನಾವಣಾ ಆಯೋಗದ ನಿಗದಿತ ಪ್ರಕ್ರಿಯೆಯ ಮೂಲಕ ತಿದ್ದುಪಡಿ ಅಥವಾ ಮರುಸೇರ್ಪಡೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.

Has your name been removed from the voters list? You will get the answer on August 24 – ತುಳುಟೈಮ್ಸ್

ಇದನ್ನೂ ಓದಿ :ನೀವೂ ಅತಿಯಾಗಿ ನಿದ್ದೆ ಮಾಡುತ್ತೀರಾ? ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/f6_23OBB8ws

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page