ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಬೆಳ್ತಂಗಡಿ:ಹಲೇಜಿ ಭಕ್ತರ ಸಂಕಲ್ಪ;700 ವರ್ಷ ಹಳೆಯ ದೇವಾಲಯ ನವೀಕರಣ

ದೇವಾಲಯ : Tulu Times l ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಹಲೇಜಿಯ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೊಸ ಹೆಜ್ಜೆ ಇಡಲಾಗಿದೆ. ದೇವಸ್ಥಾನ ಜೀರ್ಣೋದ್ಧಾರಗೊಂಡು 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಇದೀಗ ಸಂಪೂರ್ಣ ಹೊಸ ಕಲ್ಪನೆಯೊಂದಿಗೆ ಶಿಲಾಮಯ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲು ಸಂಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಊರ ಹಾಗೂ ಪರವೂರ ಭಕ್ತರನ್ನು ಒಳಗೊಂಡಂತೆ ಹೊಸ ಜೀರ್ಣೋದ್ಧಾರ ಸಮಿತಿಯ ರಚನೆಯ ಕುರಿತಂತೆ ಸಭೆ ಕರೆಯಲಾಗಿದೆ. ದೈವ–ದೇವರುಗಳ ಆಶೀರ್ವಾದ ಪಡೆದು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಆಗಸ್ಟ್ 16ರಂದು ಬೆಳಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ವಿಶೇಷ ಸಭೆ ನಡೆಯಲಿದೆ.

ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಜೀರ್ಣೋದ್ಧಾರ ನಿಧಿ ಕುಂಭ ಆರಂಭಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗುತ್ತದೆ. ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಭಕ್ತರಿಂದ ಸಂಗ್ರಹವಾಗುವ ದೇಣಿಗೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.

 ದೇವಸ್ಥಾನದ ಸಂಪೂರ್ಣ ಪುನರ್ ನಿರ್ಮಾಣಕ್ಕೆ ಊರಿನ ಮತ್ತು ಪರವೂರ ಭಕ್ತರ ಸಹಕಾರ ಅಗತ್ಯವಾಗಿ ಬೇಕಾಗಿದ್ದು.16ರಂದು ನಡೆಯುವ ಸಭೆಗೆ ಎಲ್ಲಾ ಭಕ್ತಾಧಿಗಳು ಆಗಮಿಸುವಂತೆ ಆಡಳಿತ ಸಮಿತಿ ಮತ್ತು ಸೇವಾ ಸಮಿತಿ ಕೋರಿಕೊಂಡಿದೆ.

ದೇವಸ್ಥಾನದ ಶಿಲಾಮಯ ಪುನರ್ ನಿರ್ಮಾಣವು ಭಕ್ತರ ಸಹಕಾರ ಮತ್ತು ದೇವರ ಇಚ್ಛೆಯಂತೆ ಹಂತ ಹಂತವಾಗಿ ನಡೆಯಲಿದೆ ಎಂದು ಆಡಳಿತ ಸಮಿತಿ ತಿಳಿಸಿದೆ. ಪುರಾತನ ದೇವಾಲಯದ ಪರಂಪರೆ ಹಾಗೂ ಧಾರ್ಮಿಕ ಮಹತ್ವವನ್ನು ಉಳಿಸಿಕೊಂಡು ಹೊಸ ರೂಪದಲ್ಲಿ ದೇವಸ್ಥಾನವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ತನ್ನೋಜಿ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರಿ.), ಹಲೇಜಿ ಹಾಗೂ ಸೇವಾ ಸಮಿತಿ, ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹಲೇಜಿ ವತಿಯಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರ ಸಹಕಾರವನ್ನು ಕೋರಲಾಗಿದೆ.

A vow taken by devotees from near and far; new life for a 700-year-old temple – ತುಳುಟೈಮ್ಸ್

ಇದನ್ನೂ ಓದಿ :ಆ.16ಕ್ಕೆ ಕೊಡಗಿಗೆ ಸಿಎಂ ಡಿಕೆಶಿ; ತಲಕಾವೇರಿಯಲ್ಲಿ ವಿಶೇಷ ಪೂಜೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/OI2pvxDU5y0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page