ಬ್ರೇಕಿಂಗ್ ನ್ಯೂಸ್
ಸುಳ್ಯ

ಮುದ್ದು ಕೃಷ್ಣರಿಗಾಗಿ ಜಿಲ್ಲಾ ಮಟ್ಟದ ಫೋಟೋ ಸ್ಪರ್ಧೆ

ಸ್ಪರ್ಧೆ : Tulu Times l ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಗೌರವ ಮೂಡಿಸುವ ಉದ್ದೇಶದಿಂದ ಜ್ಯೋತಿ ವಿದ್ಯಾ ಸಂಘ (ರಿ.), ಪೆರಾಜೆ, ಮಡಿಕೇರಿ, ಕೊಡಗು ವತಿಯಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ‘ಶ್ರೀ ಕೃಷ್ಣ ವೇಷದ ಫೋಟೋ ಸ್ಪರ್ಧೆ–2026’ ಆಯೋಜಿಸಲಾಗಿದೆ.

ಪ್ರಣವ್ ಫೌಂಡೇಶನ್ (ರಿ.), ಮಂಗಳೂರು ಸಹಯೋಗದಲ್ಲಿ ನಡೆಯಲಿರುವ ಈ ವಿಶೇಷ ಸ್ಪರ್ಧೆಯಲ್ಲಿ ಮಕ್ಕಳು ಶ್ರೀ ಕೃಷ್ಣನ ವೇಷ ಧರಿಸಿ ತೆಗೆಸಿದ ಛಾಯಾಚಿತ್ರಗಳನ್ನು ಕಳುಹಿಸುವ ಮೂಲಕ ಭಾಗವಹಿಸಬಹುದಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ, ಶ್ರೀ ಕೃಷ್ಣನ ವೇಷದ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ಪರಿಚಯಿಸುವುದು ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.

ಸ್ಪರ್ಧೆಯನ್ನು ಮಕ್ಕಳ ವಯಸ್ಸಿನ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿಭಾಗ 1ರಲ್ಲಿ 3 ವರ್ಷದೊಳಗಿನ ಮಕ್ಕಳು, ವಿಭಾಗ 2ರಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳು ಹಾಗೂ ವಿಭಾಗ 3ರಲ್ಲಿ 6ರಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು.

ಸ್ಪರ್ಧೆಯ ಅವಧಿ ಸೆಪ್ಟೆಂಬರ್ 4ರಿಂದ ಸೆಪ್ಟೆಂಬರ್ 25, 2026ರವರೆಗೆ ಇರಲಿದೆ. ಪ್ರತಿಯೊಂದು ವಿಭಾಗದಲ್ಲೂ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ವಿಜೇತರಿಗೆ ₹1,500 ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮುದ್ದು ಕೃಷ್ಣನಿಗೂ ಅವರದೇ ಛಾಯಾಚಿತ್ರ ಹೊಂದಿರುವ ವಿಶೇಷ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಮಗುವಿನ ಶ್ರೀ ಕೃಷ್ಣ ವೇಷದ ಸುಂದರ ಫೋಟೋ, ಜನ್ಮ ದಿನಾಂಕ ಹಾಗೂ ವಿಳಾಸದ ವಿವರಗಳನ್ನು ಸೆಪ್ಟೆಂಬರ್ 25ರೊಳಗೆ ನಿಗದಿತ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯೋಜಕರನ್ನು ಸಂಪರ್ಕಿಸಬಹುದಾಗಿದೆ.

ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಅಕ್ಟೋಬರ್ 2, 2026ರಂದು ಶುಕ್ರವಾರ ನಡೆಯಲಿದ್ದು, ಜ್ಯೋತಿ ವಿದ್ಯಾ ಸಂಘದ ಆವರಣ, ಪೆರಾಜೆ ಕಾರ್ಯಕ್ರಮಕ್ಕೆ ವೇದಿಕೆಯಾಗಲಿದೆ. ಮಕ್ಕಳ ಸೃಜನಶೀಲತೆ ಮತ್ತು ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಶ್ರೀ ಕೃಷ್ಣನ ವೇಷದ ಮೂಲಕ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ. ‘ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ – ಸಂಸ್ಕೃತಿಗೆ ಗೌರವ’ ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಹೆಚ್ಚಿನ ಮಕ್ಕಳು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

District-level photo contest for ‘Muddu Krishna’ – ತುಳುಟೈಮ್ಸ್

ಇದನ್ನೂ ಓದಿ :ವಿಶ್ವ ಪತ್ರ ಬರೆಯುವ ದಿನ: ಕೈಬರಹದ ಪತ್ರಗಳ ನೆನಪು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/EAlZlYPZOZI

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page