ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ: ‘ಕಾಡಂಚಿನ ಹಣತೆಗಳು’ ಕೃತಿ ಬಿಡುಗಡೆ

ಸುಳ್ಯ: Tulu Times l ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ. ಬಿ. ರೇವತಿ ನಂದನ್ ಅವರ ನೂತನ ಕೃತಿ ‘ಕಾಡಂಚಿನ ಹಣತೆಗಳು’ ಬಿಡುಗಡೆ ಕಾರ್ಯಕ್ರಮ ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಭಾಗವಹಿಸಿ ಕೃತಿಯ ಕುರಿತು ವಿಚಾರ ವಿನಿಮಯ ನಡೆಸಿದರು.

ನಿವೃತ್ತ ಉಪನ್ಯಾಸಕಿ ಹಾಗೂ ಸಾಹಿತಿ ಜಯಮ್ಮ ಚೆಟ್ಟಿಮಾಡ ಅವರು ‘ಕಾಡಂಚಿನ ಹಣತೆಗಳು’ ಕೃತಿಯನ್ನು ಬಿಡುಗಡೆ ಮಾಡಿದರು. ಶಿಕ್ಷಕರು ಹಾಗೂ ಅಂಕಣಕಾರರಾದ ಡಾ. ಸುಂದರ ಕೇನಾಜೆ ಅವರು ಕೃತಿಯ ಪರಿಚಯ ಮಾಡಿಕೊಟ್ಟರು. ಕೃತಿಯ ಆಶಯ, ಬರಹದ ವೈಶಿಷ್ಟ್ಯ ಹಾಗೂ ಸಾಹಿತ್ಯಿಕ ಮಹತ್ವದ ಕುರಿತು ಅವರು ಮಾತನಾಡಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ ಕುಮಾರಸ್ವಾಮಿ ತೆಕ್ಕುಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಡಾ. ಬಿ. ರೇವತಿ ನಂದನ್, ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡ ಹಾಗೂ ಡಾ. ರಂಗಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣ ಸಂಯೋಜನಾಧಿಕಾರಿ ಕೇಶವ ಸಿ.ಎ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕ ಕೆ.ಆರ್. ಗೋಪಾಲಕೃಷ್ಣ ಅವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅವರು ಆಶಯಗೀತೆ, ಮಳೆ ಹಾಡು, ಹಿರಿಯ ಗಾಯಕಿ ಎಸ್. ಜಾನಕಿ ಅವರ ನೆನಪಿನ ಗೀತೆ ಹಾಗೂ ಸ್ವಾತಂತ್ರ್ಯಗೀತೆಯನ್ನು ಹಾಡಿದರು.

ಕೃತಿಯ ಕುರಿತು ಸಂವಾದ ;

Process to purchase 15,000 new buses set in motion: Transport Minister Byrathi Suresh
Credit to original source

ಕೃತಿ ಬಿಡುಗಡೆ ಬಳಿಕ ‘ಕಾಡಂಚಿನ ಹಣತೆಗಳು’ ಕೃತಿಯ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೃತಿಯಲ್ಲಿನ ವಿಷಯವಸ್ತು, ಲೇಖಕರ ಅನುಭವಗಳು, ಸಾಹಿತ್ಯದೊಂದಿಗೆ ಸಮಾಜದ ಸಂಬಂಧ ಹಾಗೂ ಕೃತಿಯ ವಿವಿಧ ಆಯಾಮಗಳ ಕುರಿತು ಸಂವಾದ ನಡೆಯಿತು. ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಡಾ. ಬಿ. ರೇವತಿ ನಂದನ್ ಅವರ ಹೊಸ ಕೃತಿ ಓದುಗರಲ್ಲಿ ಕುತೂಹಲ ಮೂಡಿಸಿದೆ. ಕೃತಿ ಬಿಡುಗಡೆ ಕಾರ್ಯಕ್ರಮವು ಸಾಹಿತ್ಯ, ಸಂಗೀತ ಹಾಗೂ ಸಂವಾದದ ಸಮನ್ವಯದೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು ಕೃತಿಗೆ ಶುಭಹಾರೈಸಿದರು.

Sullia: ‘Kaadanchina Hanathegalu’ book released – ತುಳುಟೈಮ್ಸ್

ಇದನ್ನೂ ಓದಿ :ಶಿಕ್ಷಕರ ಹುದ್ದೆಗೆ ಕಾಯುತ್ತಿದ್ದೀರಾ? 15,000 ಹುದ್ದೆಗಳ ನೇಮಕಾತಿ ಆರಂಭ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/f6_23OBB8ws

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page