ಬ್ರೇಕಿಂಗ್ ನ್ಯೂಸ್
ಕರ್ನಾಟಕ

Belagavi: ಕನ್ನಡ ರಾಜ್ಯೋತ್ಸವದ ದಿನ ಪುಂಡಾಟ ಮೆರೆದ ಎಂಇಎಸ್ ..!

Belagavi: ಬೆಳಗಾವಿಯಲ್ಲಿ 70 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧರ್ಮವೀರ ಸಂಭಾಜಿ ಮೈದಾನದಲ್ಲಿ ಎಂಇಎಸ್ ಪುಂಡರು ಕರಾಳ ದಿನವನ್ನಾಗಿ ಆಚರಣೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಗೊತ್ತಾ…?

ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಲ್ಲಿ ಸೇರಿ ಅಲ್ಲಿಂದ ಎಂಇಎಸ್ ಪುಂಡರು ಕರಾಳ ದಿನವಾಗಿ ಆಚರಿಸಲು ಮುಂದಾಗಿದ್ದಾರೆ. ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ದಿನವೇ ನಾಡದ್ರೋಹಿಗಳಿಂದ ಕರಾಳ ದಿನಾಚರಣೆ ನಡೆದಿದೆ. ಅತ್ತ ಸಡಗರದ ರಾಜ್ಯೋತ್ಸವ ಇತ್ತ ಕರಾಳ ದಿನ‌ವಾಗಿ ರ್ಯಾಲಿ ನಡೆದಿದೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ’ಕ್ಕೆ ನಾಡಿನ ಜನತೆಗೆ ಕನ್ನಡದಲ್ಲೇ ಶುಭಾಶಯ ಕೋರಿದ ಮೋದಿ

ನಾಡದ್ರೋಹಿಗಳಿಂದ ಕರಾಳ ದಿನಾಚರಣೆ!
ಎಂಇಎಸ್ ಪುಂಡರು, ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ. ಧರ್ಮವೀರ ಸಂಬಾಜಿ ಮೈದಾನದಿಂದ ಬಾತಕಾಂಡೆ ನಗರ, ಪೋರ್ಟ್ ರೋಡ್, ಪಾಟೀಲ ಗಲ್ಲಿ ಸೇರಿ ಮರಾಠ ಮಂಗಲ ಕಾರ್ಯಾಲಯಕ್ಕೆ ಹೋಗಿ ಮುಕ್ತಾಯ ಮಾಡಲಾಯಿತು. ಮಾಧವ್ ರೋಡ್, ಎಸ್ ಬಿ ಎಮ್ ರೋಡ್ ಹೇಮು ಕಲ್ಯಾಣಿ ಚೌಕ್,ಮುಜಾವರ್ ವಲ್ಲಿ ಶನಿಮಂದಿರ ಬಳಸಿಕೊಂಡು ಬರುತ್ತಿರುವ ರ್ಯಾಲಿ ನಡೆದಿದೆ.

ಜಿಲ್ಲಾಡಳಿತದ ಪರವಾನಗಿ ಇಲ್ಲದೇ ಆಚರಣೆ..!
ಈ ವೇಳೆ ಬೀದರ್ ಬಾಲ್ಕಿ ನಿಪ್ಪಾಣಿ ಬೆಳಗಾವಿ ನಮ್ಮದೆ ಎಂದು ಪುಂಡರು ಕೂಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಹಾಕಿ ಮಹಾರಾಷ್ಟ್ರಕ್ಕೆ ಜೈ ಕಾರ ಹಾಕಿ ಕರಾಳ ದಿನ ಎಂದು ಕನ್ನಡ ರಾಜ್ಯೋತ್ಸವದ ದಿನ ಘೋಷಣೆ ಕೂಗಿದ್ದಾರೆ. ಜಿಲ್ಲಾಡಳಿತದ ಪರವಾನಗಿ ಇಲ್ಲದಿದ್ದರೂ ಸಹ ಕರಾಳ ದಿನ ಆಚರಣೆ ಮಾಡಿರುವುದು ಕೆಲವರಿಗೆ ಬೇಸರ ತಂದಿದೆ. ಕರಾಳ ದಿನ ಆಚರಣೆಗೆ ಭದ್ರತೆ ಒದಗಿಸಿ, ಮೆರವಣಿಗೆಗೆ ಅನುಕೂಲ ಮಾಡಿದ್ದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಹಿತಕರ ಘಟನೆಯಾಗದಂತೆ ಬೆಳಗಾವಿ ಪೊಲೀಸರಿಂದ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ.  ಮಹಾರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಶಳಕೆಯೊಂದಿಗೆ  ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಖಾಲಿ ಮಿರ್ಜಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈಗ ಸೆಲ್ಪಿ ಕ್ಲಿಕ್ಕಿಸಿಕೊ‌ಂಡು ಎಂಇಎಸ್ ಮುಖಂಡನನ್ನು ಸೆಲೆಬ್ರಿಟಿಯನ್ನಾಗಿಸಿರುವುದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡಿವೆ.

ಇದನ್ನೂ ಓದಿ: ಮಡಿಕೇರಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page