ಬ್ರೇಕಿಂಗ್ ನ್ಯೂಸ್
ಕರ್ನಾಟಕದೇಶಮಂಗಳೂರು

ಯಕ್ಷಗಾನದ ಹಿರಿಯ ಅರ್ಥಧಾರಿ ಶಂಭು ಶರ್ಮ ನಿಧನ

Vittal : ಯಕ್ಷಗಾನದ ಹಿರಿಯ ಅರ್ಥಧಾರಿ ಶಂಭು ಶರ್ಮ(74) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಶನಿವಾರ ಬೆಳಗ್ಗೆ ನಿಧನ ಹೊಂದಿದರು.

ಮೃತರಾದ ಶಂಭು ಶರ್ಮ ಪತ್ನಿ ಹಾಗೂ ಪುತ್ರ ಸಹಿತ, ಬಹು ಸಂಖ್ಯಾ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಉಪನ್ಯಾಸಕರಾಗಿ ಜನಪ್ರಿಯರಾಗಿದ್ದ ಅವರು ಪ್ರಸ್ತುತ ಪುತ್ತೂರು ಸಮೀಪದ ಮುರ ಎಂಬಲ್ಲಿ ವಾಸಿಸುತ್ತಿದ್ದರು.

ಶೇಣಿ ಗೋಪಾಲಕೃಷ್ಣ ಭಟ್ ಅವರೊಂದಿಗೆ ಅರ್ಥಗಾರಿಕೆ ಮಾಡಿದ ಅನುಭವಿಯಾಗಿದ್ದ ಶಂಭು ಶರ್ಮ, ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತ. ಯಾವುದೇ ಪಾತ್ರ ವಹಿಸಿದರೂ ಶಂಭು ಶರ್ಮ ಅವರ ಅರ್ಥಗಾರಿಕೆಗೆ ಅಪಾರ ಅಭಿಮಾನಿಗಳಿದ್ದಾರೆ. ಕ್ಯಾಸೆಟ್ ಸಹಿತ ಈಗಿನ ಮಾಧ್ಯಮಗಳಲ್ಲೂ ಶಂಭು ಶರ್ಮಾ ಅವರ ಪಾತ್ರಗಳನ್ನು ವೀಕ್ಷಿಸುವ ಅಭಿಮಾನಿಗಳು ಹಲವರು.

ಶಂಭು ಶರ್ಮ ಅವರಿಗೆ ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಯಕ್ಷರಂಗ ಪ್ರಶಸ್ತಿ, ವಿಟ್ಲ ಜೋಶಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಇದನ್ನೂ ಓದಿ: MADIKERI: ಮಡಿಕೇರಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page