Heavy rain;ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯ ಎಚ್ಚರಿಕೆ ನೀಡಲಾಗಿದೆ.ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಚಾಮರಾಜನಗರ,ದಕ್ಷಿಣ ಕನ್ನಡ,ಕೊಡಗು,ಮಂಡ್ಯ,ಮೈಸೂರು,ರಾಮನಗರ,ಉಡುಪಿ,ಉತ್ತರಕನ್ನಡದ ಹಲವು ಭಾಗಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈಗಾಗಲೇ ಮಳೆಯ ಆರ್ಭಟಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ.ಪ್ರತಿವರ್ಷ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಸಣ್ಣ ಸಣ್ಣ ಮಳೆಯಾಗಿ ಮಳೆಯಾಗಿ ಮಳೆ ಕಡಿಮೆಯಾಗುವ ಸೂಚನೆ ಸಿಗುತಿತ್ತು.ಆದ್ರೆ ಈ ಬಾರಿ ಇನ್ನೂ ಕೂಡ ಮಳೆ ಸುರಿಯುತ್ತಲೇ ಇದೆ.ಇದ್ರಿಂದಾಗಿ ರೈತರಂತೂ ಕೆಂಗೆಟ್ಟು ಹೋಗಿದ್ದಾರೆ.ಕರಾವಳಿ ಭಾಗದ ರೈತರಿಗೆ ದಿಕ್ಕೆ ತೋಚದಂತಾಗಿದೆ.
ಇಂದು ಮುಂಜಾನೆಯಿಂದಲೇ ಮಳೆ ಶುರುವಾಗಿದೆ.ಇದರ ಜೊತೆಗೆ ಹವಾಮಾನ ಇಲಾಖೆ ಮುಂದಿನ ಮೂರು ಗಂಟೆಗಳಲ್ಲಿ ಮೇಲೆ ಹೆಸರಿಸಿದ ಹಲವು ಭಾಗಗಳಲ್ಲಿ ಮಳೆಯಾಗುವ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ:Mangaluru: 11 ದಿನಗಳಿಂದ ಸಮುದ್ರದ ಮಧ್ಯೆ ಸಿಲುಕಿದ್ದ 31 ಮೀನುಗಾರರ ರಕ್ಷಣೆ
…………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











