ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Surathkal: ಇಬ್ಬರಿಗೆ ಚೂರಿ ಇರಿದು ಪರಾರಿಯಾದ ತಂಡ – ಪ್ರಕರಣ ದಾಖಲು

Surathkal:‌ ಇಬ್ಬರು ಯುವಕರಿಗೆ ತಂಡವೊಂದು ಚೂರಿ ಇರಿದು ಪರಾರಿಯಾದ ಘಟನೆ ನಡೆದಿದ್ದು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಕಾನ ಪೆಟ್ರೋಲ್ ಪಂಪ್‌ ಬಳಿಯ ಬಾರ್‌ ಒಂದರ ಪಕ್ಕ ಈ ಘಟನೆ ನಡೆದಿದೆ. ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿಗಳಾದ ನಿಝಾಮ್ (23) ಮತ್ತು ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ಹಸನ್ ಮುರ್ಷಿದ್ (18) ಚೂರಿ ಇರಿತಕ್ಕೊಳಗಾದವರು.

ಘಟ‌ನೆಯಿಂದ ನಿಝಾಮ್ ರ ಹೊಟ್ಟೆಗೆ ಗಂಭೀರ‌ ಸ್ವರೂಪದ ಗಾಯವಾಗಿದ್ದು, ಆತನಿಗೆ‌ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಮುರ್ಷಿದ್ ಮುಕ್ಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಐದು‌ ಮಂದಿ ಸ್ನೇಹಿತರು ಎರಡು ದ್ವಿಚಕ್ರ ವಾಹನಗಳಲ್ಲಿ ಕೃಷ್ಣಾಪುರಕ್ಕೆ ಹೋಗುತ್ತಿದ್ದ ವೇಳೆ ನಿಝಾಮ್ ಮತ್ತು ಮುರ್ಷಿದ್ ಇದ್ದ ವಾಹನದ ಪೆಟ್ರೋಲ್ ಖಾಲಿಯಾಗಿದೆ. ಇನ್ನೊಂದು ವಾಹನದಲ್ಲಿದ ಸ್ನೇಹಿತರು ಪೆಟ್ರೋಲ್ ತರಲು ಪೆಟ್ರೋಲ್ ಪಂಪ್‌ಗೆ ಹೋಗಿದ್ದರು. ಈ ವೇಳೆ ಸಮೀಪದ‌ ಬಾರ್ ಬಳಿಯಿಂದ ಬಂದ ನಾಲ್ವರು ಅಪರಿಚಿತರು ಹನೀಫ್ ಗೊತ್ತಾ ಎಂದು ಪ್ರಶ್ನಿಸಿ ಮಾತು ಆರಂಭಿಸಿದರು ಎನ್ನಲಾಗಿದೆ.

ಈ ವೇಳೆ ಎರಡೂ ತಂಡಗಳ‌ ನಡುವೆ ಮಾತಿನ ಚಕಮಕಿ ನಡೆದು ಓರ್ವ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಗಾಯಾಳುಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸುರತ್ಕಲ್‌ ಪೊಲೀಸ್‌ ನಿರೀಕ್ಷಕ ಪ್ರಮೋದ್ ಕುಮಾರ್ ಮತ್ತು ಸಿಬ್ಬಂದಿ‌‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ನಾಲ್ವರ ವಿರುದ್ಧ 307 ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Biggboss​ ಮನೆಯಲ್ಲಿ ‘S’ ಪದ ಬಳಕೆ; ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ: https://www.youtube.com/@tulutimess 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page