ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್..ವೀಡಿಯೋ ವೈರಲ್‌ !

ಮಂಗಳೂರು: Tulu Times | ವಿದ್ಯಾರ್ಥಿಯೊಬ್ಬ ಅತೀ ವೇಗವಾಗಿ ಬೈಕ್ ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಿದ್ದಿರುವ ಘಟನೆ ನಡೆದಿದೆ. ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿದ್ಯುತ್‌ ಆಘಾತ ಆಗಿದ್ದು ಹೇಗೆ..?

ಉಳ್ಳಾಲ ತಾಲೂಕಿನ ಕಿನ್ನ ಸಂಕೇಶ ಎಂಬಲ್ಲಿ  ಬೈಕ್‌ ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಸವಾರರಿಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ. ಬೈಕಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಿಜಾಪುರ ಮೂಲದವರಾಗಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನೇರವಾಗಿ ಬಂದು ವಿದ್ಯುತ್ . ಬೈಕಿನಲ್ಲಿದ್ದ ಕಂಬಕ್ಕೆ ಡಿಕ್ಕಿಯಾಗಿದೆ.  ಡಿಕ್ಕಿಯಾದ ರಭಸಕ್ಕೆ ಕಂಬ ಮುರಿದು ಬಿದ್ದಿದೆ. ಡಿಕ್ಕಿಯಾಗಿ ವಿದ್ಯುತ್ ತಂತಿ ಬಿದ್ದಿದೆ. ಜನ ಕರೆಂಟ್ ಇದೆಯೆಂಬ ಭಯದಲ್ಲಿ ಹತ್ತಿರ ಹೋಗಲಿಲ್ಲ.ಕಂಬ ಉರುಳುತ್ತಲೇ ವಿದ್ಯುತ್ ಲೈನ್ ಕಟ್ ಆಗಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page