ನವದೆಹಲಿ : Tulu Times | ದೇಶದಲ್ಲಿನ ಎಲ್ಲಾ ರೀತಿಯ ಉಗ್ರತನವನ್ನು ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯ ಎಂದು Central Reserve Police Force (ಸಿಆರ್‌ಪಿಎಫ್) ಮಹಾನಿರ್ದೇಶಕ ಗ್ಯಾನೆಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
2019ರ ಭೀಕರ ಪುಲ್ವಾಮ ದಾಳಿಯ ಏಳನೇ ವಾರ್ಷಿಕೋತ್ಸವದ ಅಂಗವಾಗಿ, ಸಿಆರ್‌ಪಿಎಫ್ ಉನ್ನತ ಅಧಿಕಾರಿಗಳು, ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರ ಹಿರಿಯ ಅಧಿಕಾರಿಗಳು ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಈ ದಿನ ನಾವು ನಮ್ಮ 40 ಧೀರ ಯೋಧರನ್ನು ಕಳೆದುಕೊಂಡೆವು. ದಾಳಿಯ ಸ್ಥಳದ ಸಮೀಪವೇ ನಿಂತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ, ಎಂದು ಅವರು ಹೇಳಿದರು.
ಹುತಾತ್ಮರ ಕುಟುಂಬಗಳಿಗೆ ನೆರವು ;
ಸಿಆರ್‌ಪಿಎಫ್ ಕುಟುಂಬ ಹಾಗೂ CRPF ಪರಿವಾರ್ ಹುತಾತ್ಮರ ಕುಟುಂಬಗಳೊಂದಿಗೆ ಸದಾ ನಿಂತಿದೆ ಎಂದು ಅವರು ಹೇಳಿದರು. 19 ಕುಟುಂಬಗಳಿಗೆ ಮನೆಗಳ ಒದಗಿಸುವಿಕೆ, ಕೆಲವು ಕುಟುಂಬಗಳಿಗೆ ರಾಜ್ಯ ಸರ್ಕಾರಗಳ ಸಹಕಾರದಿಂದ ಭೂಮಿ, ಮಕ್ಕಳ ಶಿಕ್ಷಣ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಕ್ರಮ, ಪ್ರಾಯಪೂರ್ಣವಾದ ನಂತರ ಉದ್ಯೋಗಾವಕಾಶ, ಸರ್ಕಾರದಿಂದ ₹2.25 ರಿಂದ ₹3 ಕೋಟಿ ತನಕ ಪರಿಹಾರ, ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸಲು “ವೀರ ಕುಟುಂಬ” ಆ್ಯಪ್‌ನ್ನೂ ಪ್ರಾರಂಭಿಸಲಾಗಿದೆ.
ದಾಳಿಯ ಹಿನ್ನೆಲೆ ;
2019ರ ಫೆಬ್ರವರಿ 14ರಂದು, ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ಕಾಫಿಲಾದ ಬಸ್‌ಗೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊಣೆ ಹೊತ್ತಿತ್ತು. ಇದೇ ದೇಶವನ್ನೇ ನಡುಗಿಸಿದ ಘಟನೆ ಇದಾಗಿತ್ತು ಕೂಡಾ. ಹೀಗಿರುವಾಗ, ಹುತಾತ್ಮರ ಕುಟುಂಬಗಳ ಕಲ್ಯಾಣ ಮತ್ತು ದೇಶದ ಭದ್ರತೆಗಾಗಿ ಸಿಆರ್‌ಪಿಎಫ್ ಸದಾ ಬದ್ಧವಾಗಿರುತ್ತದೆ ಎಂದು ಮಹಾನಿರ್ದೇಶಕರು ಪುನರುಚ್ಚರಿಸಿರುತ್ತಾರೆ.
CRPF is always committed to the welfare of the families of martyrs and the security of the country – ತುಳು ಟೈಮ್ಸ್
ಇದನ್ನೂ ಓದಿ : ರಜನಿಕಾಂತ್ ರನ್ನು ಶಿವನ ರೂಪದಲ್ಲಿ ಪೂಜೆ : ಅಭಿಮಾನಿಯ ವಿಶೇಷ ಭಕ್ತಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/DgrGL2FhBLE?si=LlRqS4BBtB_ijE4H











