ನೆಲ್ಯಾಡಿ: Tulu Times | ನೆಲ್ಯಾಡಿಯ ಬರೆಗುಡ್ಡೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಬರೆಗುಡ್ಡೆ ತಿರುವಿನ ಸಮೀಪ ತಲುಪಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ 11 ಕೆವಿ ವಿದ್ಯುತ್ ತಂತಿಯಿದ್ದ ಕಂಬಕ್ಕೆ ಡಿಕ್ಕಿಯಾಗಿ, ವಿದ್ಯುತ್ ಕಂಬ ತುಂಡಾಗಿ ನೆಲಕ್ಕೆ ಬಿದ್ದಿದೆ.
ಘಟನೆ ನಡೆದದ್ದು ಹೇಗೆ..?
ನೆಲ್ಯಾಡಿಯಿಂದ ಬಲ್ಯ ಕಡೆಗೆ ಉಮೇಶ್ ಎಂಬವರು ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, 11 ಕೆವಿ ಲೈನ್ ಕಂಬ ಮುರಿದು ಬಿದ್ದ ಪರಿಣಾಮ ಸುತ್ತಮುತ್ತಲಿನ ಪರಿಸರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಚಾಲಕ ಉಮೇಶ್ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜನ್ಮ ದಿನಾಂಕ 9 ಬರುವ ಜನರಿಗೆ ಈ ದಿನ ಹೇಗಿರುತ್ತದೆ ?
ಶಿರಾಡಿಯಲ್ಲಿ ತನ್ನ ಹೆಂಡತಿ ಮನೆಗೆ ಬಂದು ಆತ್ಮಹ*ತ್ಯೆ ಮಾಡಿಕೊಂಡ ಪತಿ!
ಕಡಬ: ಪ್ರತ್ಯೇಕ ಪ್ರಕರಣದಲ್ಲಿ, ಶಿರಾಡಿಯಲ್ಲಿ ಪತ್ನಿ ಮನೆಗೆ ಬಂದು ಪತಿಯೊಬ್ಬರು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶಿರಾಡಿ ನಿವಾಸಿ ಮಂಜು ನಾಯ್ಕ (49) ಎಂದು ಗುರುತಿಸಲಾಗಿದೆ.
ಆತ್ಮಹ”ತೈ ಮಾಡಿಕೊಳ್ಳಲು ಕಾರಣ ಏನು..?
ಮೃತ ಮಂಜು (49) ವಿಪರೀತ ಕುಡಿಯುವ ಚಟ ಹೊಂದಿದ್ದರು. ಹೀಗಾಗಿ ಅವರ ಹೆಂಡತಿ ಬಹಳ ನೊಂದಿದ್ದರು. ಕುಡಿದ ಅಮಲಿನಲ್ಲಿ ಮನೆಯಲ್ಲಿ ನೀಡುತ್ತಿದ್ದ ಕಿರುಕುಳ ಹಿನ್ನೆಲೆಯಲ್ಲಿ, ಅವರ ಪತ್ನಿ ಸುಶೀಲ ಅವರು ತನ್ನ ತಂದೆ ತನಿಯಪ್ಪ ಅವರ ಮನೆಗೆ ತೆರಳಿ ಅಲ್ಲಿಯೇ ವಾಸವಿದ್ದರು. ಹೀಗಾಗಿ ಪತ್ನಿಯ ತವರು ಮನೆಯಾದ ಶಿರಾಡಿ ಗ್ರಾಮದ ಬರಮೇಲು ಎಂಬಲ್ಲಿ ಮಂಜು ನಾಯ್ಕ ಅವರು ಕೂಡ ನೆಲೆಸಿದ್ದರು ಎನ್ನಲಾಗಿದೆ. ಮಂಜು ನಾಯ್ಕ ಶುಕ್ರವಾರ ಸಂಜೆ ಬರಮೇಲು ಎಂಬಲ್ಲಿನ ತಾರಸಿ ಕಟ್ಟಡದ ಮೇಲ್ಬಾಗದ ಸಿಮೆಂಟ್ ಕಿಟಕಿಯ ತೂತಿಗೆ ಪ್ಲಾಸ್ಟಿಕ್ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಸುಶೀಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nelyadi: Car hits electric pole, driver escapes danger- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











