ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸತ್ಯ ಸಾಯಿ ಸೇವಾ ಸಮಿತಿ : 28ನೇ ಉಚಿತ ವೈದ್ಯಕೀಯ ಶಿಬಿರ

ಉಪ್ಪಿನಂಗಡಿ: Tulu Times | ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ವತಿಯಿಂದ 28ನೇ ಉಚಿತ ವೈದ್ಯಕೀಯ ಶಿಬಿರವು ಉಪ್ಪಿನಂಗಡಿಯ ನಂದಿಕೇಶ್ವರ ಭಜನಾ ಮಂಡಳಿ, ನಂದಿನಿ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಶಿಬಿರವನ್ನು ಸತ್ಯಸಾಯಿ ಸೇವಾ ಸಮಿತಿ, ಕೆ.ಎಸ್. ಹೆಗಡೆ ವೈದ್ಯಕೀಯ ಕಾಲೇಜು ಹಾಗೂ ಯೆನೆಪೋಯ ಡೆಂಟಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಜನಸೇವೆಯೇ ಟ್ರಸ್ಟ್‌ನ ಮೂಲ ಧ್ಯೇಯ ;

ಕಾರ್ಯಕ್ರಮವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ ಅವರು ಉದ್ಘಾಟಿಸಿದರು. ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ರಾಮನಗರ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮಾಂತರ ಪ್ರದೇಶಗಳ ಬಡ ಮತ್ತು ಹಿಂದುಳಿದ ಜನರ ಆರೋಗ್ಯ ಸಂರಕ್ಷಣೆಗೆ ತನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದೆ. ವ್ಯಕ್ತಿಯ ಆರೋಗ್ಯ ಸುಸ್ಥಿರವಾಗಿದ್ದರೆ ಮಾತ್ರ ಸಮಾಜವೂ ಆರೋಗ್ಯಕರವಾಗಿರಲು ಸಾಧ್ಯ. ಈ ಉದ್ದೇಶದಿಂದ ಪ್ರತೀ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಜನಸೇವೆಯೇ ಟ್ರಸ್ಟ್‌ನ ಮೂಲ ಧ್ಯೇಯವಾಗಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಈ ವೈದ್ಯಕೀಯ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ವಿವಿಧ ಆರೋಗ್ಯ ಸೇವೆಗಳ ಪ್ರಯೋಜನವನ್ನು ಪಡೆದುಕೊಂಡರು. ಜೊತೆಗೆ ಸ್ಥಳೀಯ ಸಾರ್ವಜನಿಕರಿಂದ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಸತ್ಯಸಾಯಿ ಸೇವಾ ಸಮಿತಿಯ ದೇವಾನಂದ ಶೆಟ್ಟಿ, ಯೆನೆಪೋಯ ಡೆಂಟಲ್ ಕಾಲೇಜಿನ ಅಪೂರ್ವ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Puttila Parivar Seva Trust and Sathya Sai Seva Samiti: 28th Free Medical Camp – ತುಳು ಟೈಮ್ಸ್

ಇದನ್ನೂ ಓದಿ :ಶ್ರೀ ಜಟಾಧಾರಿ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಸಮಾಲೋಚನಾ ಸಭೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=IDkF0fD38uBlvajW

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page