ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

ಮಂಗಳೂರು: ಅವಹೇಳನಕಾರಿ ಪೋಸ್ಟ್‌ – ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧನ

ಮಂಗಳೂರು – ತುಳು ಟೈಮ್ಸ್:‌ ಹಿಂದೂ ಧರ್ಮದ ಬಗ್ಗೆ ಅವಹೇಳಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಆಗಮಿಸುತ್ತಿದ್ದಂತೆ ಈತನನ್ನು ಬಂಧಿಸಲಾಗಿದೆ. ಬಂಟ್ವಾಳದ ಸಜಿಪ ಮುನ್ನೂರು ನಿವಾಸಿ ಅಬ್ದುಲ್ ಖಾದರ್ ನೇಹಾದ್ ಬಂಧಿತ ಆರೋಪಿ.

2025 ಅಕ್ಟೋಬರ್ 11ರಂದು ಇನ್‌ಸ್ಟಾಗ್ರಾಮ್‌ನ sdpi_2025_ID ಎಂಬ ಖಾತೆಯಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್‌ ದಾಖಲಾಗಿತ್ತು. ಈ ಪ್ರಕರಣವನ್ನು ತಾಂತ್ರಿಕ ವಿಧಾನದಿಂದ ತನಿಖೆ ನಡೆಸಿದಾಗ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂಬಾತ ಎಸ್‌ಡಿಪಿಐ 2025 ಎಂಬ ಖಾತೆಯಿಂದ ಪೋಸ್ಟ್‌ ಮಾಡಿರೋದು ತಿಳಿದುಬಂದಿತ್ತು.

ಇದನ್ನೂ ಓದಿ: ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

ಆರೋಪಿ ನೇಹಾದ್ ವಿರುದ್ಧ LOC ಹೊರಡಿಸಲಾಗಿರುತ್ತದೆ. ಡಿ. 14ರಂದು ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನೇಹಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಾಯಿಬೆಟ್ಟು ಕೊಟ್ಟಾನ ಹೌಸ್ ಮೂಲದ ಆರೋಪಿ, ಪ್ರಸ್ತುತ ಸಜಿಪಮುನ್ನೂರಿಗೆ ಸ್ಥಳಾಂತರಗೊಂಡಿದ್ದ ಎನ್ನಲಾಗಿದೆ. ಈತನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Mangaluru City police have arrested a person accused of posting an inflammatory content about Hindus on an Instagram page SDPI_2025 ID. The police said a look-out out notice was issued against Abdul Nehad, a resident of Sajipamunnuru, who was accused posting inflammatory content. Tulu Times


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ  : https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page