ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಘೋಷಣೆ

ಬೆಂಗಳೂರು: Tulu Times | ವೃಕ್ಷಮಾತೆ ಸಾಲುಮರದ ತಿಮ್ಮಕ್ಕ  ಸ್ಮರಣಾರ್ಥ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇದನ್ನೂ ಓದಿ: ಗೆಳೆತನದ ಹೆಸರಲ್ಲಿ ಎಲ್ಲರೂ ನಿಮ್ಮನ್ನು ಬಳಸಿಕೊಳ್ಳುತ್ತಾರೆ ಅಂತ ಅನಿಸುತ್ತಿದ್ಯಾ?

ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಾಲುಮರದ ತಿಮ್ಮಕ್ಕ ಅವರ ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ಥಾಪನೆ ಕುರಿತಂತೆ ಮಾಹಿತಿ ನೀಡಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ. ಇದರ ಜೊತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ದೇಶದ ಹೆಸರಾಂತ ಕಾದಂಬರಿಗಾರ ಡಾ.ಎಸ್.ಎಲ್‌.ಭೈರಪ್ಪ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದರು.

ಇದನ್ನೂ ಓದಿ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಬಾಲ ನಟರನ್ನು ಕಡೆಗಣಿಸಲಾಯಿತೇ ?

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಯು.ಟಿ. ಖಾದರ್‌ ಅವರು ಶಾಸಕ ಎಚ್‌.ವೈ. ಮೇಟಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಮಾಜಿ ಶಾಸಕ ಆರ್‌.ವಿ. ದೇವರಾಜ್‌, ಶಿವಶರಣಪ್ಪಗೌಡ ಪಾಟೀಲ್‌, ಖ್ಯಾತ ಸಾಹಿತಿ ಎಸ್‌.ಎಲ್‌. ಭೈರಪ್ಪ, ಚಲನಚಿತ್ರ ನಟ ಎಂ.ಎಸ್‌. ಉಮೇಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಇದನ್ನೂ ಓದಿ: ಒಬ್ಬ ವಿದ್ಯಾರ್ಥಿಯಿದ್ದರೂ ಸರ್ಕಾರಿ ಶಾಲೆ ನಡೆಯುತ್ತದೆ : ಸಚಿವ ಮಧು ಬಂಗಾರಪ್ಪ

ವಿಧಾನಪರಿಷತ್‌ನಲ್ಲಿ ಮಾಜಿ ಸದಸ್ಯ ಕೆ. ನರಹರಿ, ಆರ್‌.ವಿ. ದೇವರಾಜ್‌, ಶಾಸಕ ಎಚ್‌.ವೈ. ಮೇಟಿ, ಸಾಹಿತಿಗಳಾದ ಎಸ್‌.ಎಲ್‌. ಭೈರಪ್ಪ, ಡಾ. ಎನ್‌.ಆರ್‌.ನಾಯಕ, ಸಾಲುಮರದ ತಿಮ್ಮಕ್ಕ, ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್‌, ಗಾಯಕಿ ಅನುರಾಧಾ ಧಾರೇಶ್ವರ, ಚಲನಚಿತ್ರ ನಟರಾದ ಧರ್ಮೇಂದ್ರ, ಉಮೇಶ್‌ ಅವರ ನಿಧನಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚಿಸಿ ನಿರ್ಣಯವನ್ನು ಮಂಡಿಸಿದರು. ಅದಕ್ಕೆ ಸಭಾನಾಯಕ ಎನ್‌.ಎಸ್‌. ಬೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರ ಸದಸ್ಯರು ಅಗಲಿದ ಗಣ್ಯರ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದರು.

Award presented every year in the name of Thimmakka, a tree-like tree: CM- ತುಳುಟೈಮ್ಸ್

ಇದನ್ನೂ ಓದಿ: ಬೀದಿನಾಯಿಗಳಿಗೆ ಎರಡು ಹೊತ್ತಿನ ಬಿರಿಯಾನಿ ಭಾಗ್ಯ ನಿಜಾನಾ ?

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page