Dk Shivakumar:ಈ ಬಾರಿ ಸಿಎಂ ಆಗ್ತಾರಾ.ಈ ಬಾರಿಯ ದೀಪಾವಳಿಗೆ ರಾಜಕೀಯ ಕ್ರಾಂತಿ ನಡೆಯುತ್ತೆ.ಸಿಎಂ ಬದಲಾವಣೆ ಆಗುವ ಸಾಧ್ಯತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೀತಾನೆ ಇದೆ.ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ.ಇನ್ನೊಂದು ಕಡೆ ಡಿಕೆ ಶಿವಕುಮಾರ್ ಅಧಿಕಾರಕ್ಕೆ ಏರೋದ್ರ ಬಗ್ಗೆ ಯೋಚಿಸ್ತಿದ್ದಾರೆ.ಇವೆಲ್ಲದ್ರ ಮಧ್ಯೆ ಡಿಕೆ ಶಿವಕುಮಾರ್ ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದಾನೇ ಸುದ್ದಿಗೆ ಬರ್ತಿದ್ದಾರೆ.
ಹಿಂದೊಮ್ಮೆ ವಿಧಾನಸಭಾ ಅಧಿವೇಶನದಲ್ಲಿ ಡಿಕೆ ಶಿವಕುಮಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಹಾಡಿನ ಸಾಲನ್ನು ಹಾಡಿದ್ರು.ಆ ನಂತರದಲ್ಲಿ ಕಾಂಗ್ರೆಸ್ಸಿಗರಿಂದಲೇ ಡಿಕೆಶಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.ಹಲವಾರು ಹಿರಿಯ ನಾಯಕರು ಡಿಕೆಶಿ ವರ್ತನೆಯನ್ನು ಖಂಡಿಸಿದ್ರು.ಡಿಕೆಶಿ ಹಾಡಿರೋದು ಕಾಂಗ್ರೆಸ್ ಸಿದ್ದಾಂತಕ್ಕೆ ತಕ್ಕುದಲ್ಲ ಎಂಬ ಟೀಕೆಗಳು ಬರತೊಡಗಿದ್ವು.ವಿರೋಧ ಮಟ್ಟಕ್ಕೆ ತಲುಪುತ್ತಿದ್ದಂತೆ ಡಿಕೆಶಿವಕುಮಾರ್ ಬಹಿರಂಗವಾಗಿ ಕ್ಷಮೆ ಕೇಳಿದ್ರು.
ಆರ್ ಎಸ್ ಎಸ್ ಗೀತೆ ಹಾಡಿರೋದ್ರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಕರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ.ಎಂಬ ಮಾತುಗಳನ್ನು ಡಿಕೆಶಿ ಹೇಳಿದ್ದರು.ಯಾವತ್ತೂ ನನ್ನ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ ಇರುತ್ತದೆ ಎಂಬ ಹೇಳಿಕೆ ನೀಡಿ ವಿವಾದವನ್ನು ತಣ್ಣಗೆ ಮಾಡಿದ್ರು.
ಇತ್ತೀಚೆಗೆ ಜೆಪಿ ಪಾರ್ಕ್ ನಲ್ಲಿ ನಡೆದ ಡಿಕೆಶಿ ನಡಿಗೆ ಕಾರ್ಯಕ್ರಮ ದೊಡ್ಡ ಜಟಾಪಟಿಗೆ ಕಾರಣವಾಗಿತ್ತು.ಸ್ಥಳೀಯ ಶಾಸಕ ಮುನಿರತ್ನ ರನ್ನು ಏಕವಚನದಲ್ಲಿ ಕರೆದು ಅಗೌರವಿಸಿದ್ರು.ಮುನಿರತ್ನ ಸಂಘದ ಗಣವೇಷ ಧರಿಸಿ ಬಂದಿದ್ದನ್ನು ಗಮನಿಸಿದ ಡಿಕೆ ಶಿವಕುಮಾರ್ ಏಯ್ ಕರಿಟೋಪಿ ಬಾರೋ ಇಲ್ಲಿ ಎಂದು ಅವಮಾನಿಸಿ ಕರೆದಿದ್ದಾರೆ.ಸಂಘದ ಗಣವೇಷದಲ್ಲಿ ಟೋಪಿ ಇದ್ದೇ ಇರುತ್ತದೆ.ಇದನ್ನು ತಿಳಿದೇ ಡಿಕೆ ಶಿವಕುಮಾರ್ ಕರಿಟೋಪಿ ಎಂದು ಕರೆದಿದ್ದಾರೆ.
ಮುನಿರತ್ನರನ್ನು ಕರಿಟೋಪಿ ಎಂದು ಕರೆದು ಮಾತಾಡಿಸಿದ್ದನ್ನು ಹಲವಾರು ನಾಯಕರು ಖಂಡಿಸಿದ್ದಾರೆ.ಸಂಘದ ಗಣವೇಷಕ್ಕೆ ಬೇಕಂತಲೇ ಡಿಕೆ ಶಿವಕುಮಾರ್ ಅವಮಾನಿಸಿದ್ದಾರೆ.ಎಂಬ ಮಾತುಗಳು ಕೇಳಿಬರುತ್ತಿದೆ.ಡಿಕೆ ವರ್ತನೆಯಿಂದ ಒಂದಷ್ಟೂ ಮಂದಿಗೆ ಬೇಸರ ಉಂಟಾಗಿದೆ.ಅಂದು ಆರ್ ಎಸ್ ಎಸ್ ಗೀತೆ ಹಾಡಿಗೆ ವಿರೋಧ ವ್ಯಕ್ತವಾಯಿತು ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ್ರು.ಈಗ ಆರ್ ಎಸ್ ಎಸ್ ಧಿರಿಸಿಗೆ ಅವಮಾನಿಸಿದ್ದಾಕ್ಕಾಗಿ ಕ್ಷಮೆ ಕೇಳ್ತಾರಾ ಎಂಬ ಪ್ರಶ್ನೆಯನ್ನು ಜನ ಕೇಳೋದಿಕ್ಕೆ ಶುರುಮಾಡಿದ್ದಾರೆ.
ಸಂಘದ ವಿರುದ್ದವಾಗಿ ಏನು ಮಾಡಿದರೂ ಮಾತಾಡಿದರೂ ನಡೆಯುತ್ತೆ ಎಂಬಂತೆ ಡಿಕೆ ಶಿವಕುಮಾರ್ ವರ್ತಿಸುತ್ತಿದ್ದಾರೆ.
ಹಾಸ್ಯಕ್ಕೋ ಬಿಜೆಪಿಗರನ್ನೂ ಕುಟುಕುವುದಕ್ಕೋ ಡಿಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆಯನ್ನು ಹಾಡಿದ್ರು.ಆದ್ರೆ ಆ ನಂತ್ರದಲ್ಲಿ ಒತ್ತಡ ಹೆಚ್ಚಾಗುತ್ತ ಹೋಯಿತು,ಜೊತೆಗೆ ಒಂದು ಸಮುದಾಯಕ್ಕೆ ನೋವಾಗುತ್ತೆ ಅನ್ನೋ ಕಾರಣಕ್ಕೆ ಕೂಡಲೇ ಕ್ಷಮೆ ಕೂಡ ಯಾಚಿಸಿದ್ರು.ಈಗ ಆರ್ ಎಸ್ ಎಸ್ ಗಣವೇಷ ಧರಿಸಿರುವ ವ್ಯಕ್ತಿಯನ್ನು ಕರಿಟೋಪಿ ಎಂದು ಕರೆದು ನಿಂದಿಸಿರುವುದು ದೊಡ್ಡ ಸಮುದಾಯಕ್ಕೆ ನೋವುಂಟು ಮಾಡಿದೆ.ಇದಕ್ಕಾಗಿ ಡಿಕೆ ಶಿವಕುಮಾರ್ ಕ್ಷಮೆ ಕೇಳ್ತಾರಾ ಎಂಬ ಪ್ರಶ್ನೆ ಹಲವರದ್ದು.
ಇದನ್ನೂ ಓದಿ:RSS Ban ಮಾಡಲು ಸಾಧ್ಯವೇ ಇಲ್ಲಾ.ಏಕೆ ಗೊತ್ತಾ?
…………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ನ ಕ್ಲಿಕ್ ಮಾಡಿ:https://www.youtube.com/@tulutimess











