ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ: Tulu Times | ಬೆಳ್ತಂಗಡಿಯ ವಾಮದಪದವಿನಲ್ಲಿ ಜನವಸತಿ ಇಲ್ಲದ ಜಾಗದ ಪಾಳುಬಿದ್ದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: ಬಂಟ್ವಾಳದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ವಶಕ್ಕೆ

ಮಂಗಳೂರಿನ ಉಳ್ಳಾಲ ಕಾಪಿಕಾಡ್ ನಿವಾಸಿಯಾದ ಮನ್ವಿತ್  ಎಂಬವರು ತನ್ನ ತಂದೆಯ ಈ ಖಾಲಿ ನಿವೇಶನದ ಅಳತೆ ಮಾಡುವ ಉದ್ದೇಶದಿಂದ ಕಾರ್ಮಿಕರ ಮೂಲಕ ಹುಲ್ಲು, ಪೊದೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಾವಿಯ ಒಳಗೆ ಅಪರಿಚಿತ  ಮೃತದೇಹ ಪತ್ತೆಯಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಅಪರಿಚಿತ ವ್ಯಕ್ತಿಯು ಸುಮಾರು 50-60 ವರ್ಷ ಪ್ರಾಯದವನಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಂಬಳ ಓಟಕ್ಕೆ ಜಿಲ್ಲಾಡಳಿತ ಕಟ್ಟೆಚ್ಚರ.. ಮೈಕ್‌ ಬಳಸುವ ಹಾಗಿಲ್ಲ

ಮಗುವಿಗೆ ಮೇಲೆ ಹರಿದ ಕಾರು!

ಪ್ರತ್ಯೇಕ ಪ್ರಕರಣಗಳಲ್ಲಿ, ರಸ್ತೆ ದಾಟಲು ಅಜ್ಜನ ಜೊತೆ ನಿಂತುಕೊಂಡಿದ್ದ ಮಗುವಿಗೆ ಕಾರು ಢಿಕ್ಕಿಯಾಗಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಬೀಟಿಗೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಚಾರ್ಮಾಡಿ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಮಗು ಮಹಮ್ಮದ್ ಹಝಿರಿನ್ ಮೃತಪಟ್ಟ ಕಂದಮ್ಮ.

ಇದನ್ನೂ ಓದಿ: ಡಿವೋರ್ಸ್‌ ಬಳಿಕ ತಂದೆ ಮಕ್ಕಳ ಪೋಷಣೆ ಮಾಡೋದು ಕಡ್ಡಾಯ: ಸುಪ್ರೀಂ ಕೋರ್ಟ್‌ ತೀರ್ಪು

ಈ ಬಗ್ಗೆ ಕಾರು ಚಾಲಕ ಮಹಮ್ಮದ್ ರಫೀಕ್ ಎಂಬವರ ಮೇಲೆ ದೂರು ದಾಖಲಾಗಿದೆ. ಡಿ. 3ರಂದು ಮಧ್ಯಾಹ್ನದ ವೇಳೆ ಅಜ್ಜನ ಜೊತೆಗೆ ತಿಂಡಿ ತರಲೆಂದು ಮಗು ಅಂಗಡಿಗೆ ತೆರಳಿದ್ದಾರೆ. ಹಿಂದಿರುಗಿ ರಸ್ತೆ ದಾಟುತ್ತಿದ್ದಾಗ ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿದೆ. ದೂರಕ್ಕೆ ಎಸೆಯಲ್ಪಟ್ಟ ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಲೆ ಇದ್ದರೆ ಬೆಳೆ ಇಲ್ಲ : ರೈತರಿಗೆ ಆಗುವ ಮೋಸದ‌ ಹಿಂದಿದೆ ವ್ಯಾಪಾರಿಗಳ ಕೈವಾಡ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page