ಸುಳ್ಯ : Tulu Times | ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಆಯೋಜಿಸಲ್ಪಟ್ಟ ಅರೆಭಾಷೆ “ಅಪ್ಪ “ನಾಟಕದ ಪ್ರಥಮ ರಂಗ ಪ್ರದರ್ಶನದ ಉದ್ಘಾಟನಾ ಸಮಾರಂಭವು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ನ. 27 ರಂದು ನಡೆಯಿತು.
ಅರೆಭಾಷೆ ಬೆಳವಣಿಗೆಗೆ ಅಪ್ಪ ನಾಟಕ ಪೂರಕವಾಗಲಿ. ಕಲಾವಿದರಿಗೂ ಇದೊಂದು ಉತ್ತಮ ವೇದಿಕೆಯಾಗಿದ್ದು, ಅರೆಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಕಾಡೆಮಿ ಆಪ್ ಲಿಬರಲ್ ಏಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಚಿದಾನಂದ ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅರೆಭಾಷೆ ನಾಟಕ ಅಪ್ಪ ಅತೀ ಹೆಚ್ಚು ಪ್ರದರ್ಶನ ಕಾಣಲು ಅರೆಭಾಷೆ ಅಕಾಡೆಮಿ ಕಡೆಯಿಂದ ಗುರಿ ಇರಿಸಿಕೊಳ್ಳಲಾಗಿದೆ. ಎಲ್ಲರು ಸಹಕಾರ ನೀಡಬೇಕೆಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ನಾಟಕ ಪ್ರದರ್ಶನ ಸುಮಾರು ಒಂದೂವರೆ ಗಂಟೆಗಳ ಕಾಲ ಮೂಡಿ ಬಂದಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಮುಂದಿನ ನಾಟಕ ಪ್ರದರ್ಶನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಬರುವ ನವೆಂಬರ್ 30 ಕ್ಕೆ, ಎಲ್ಲಾ ಪ್ರೇಕ್ಷಕರಿಗೂ ಪ್ರೀತಿಯ ಆಹ್ವಾನದ ಕರೆಯನ್ನು ನೀಡಲಾಗಿದೆ.
ವೇದಿಕೆಯಲ್ಲಿ ರಂಗ ನಿರ್ದೇಶಕ ತುಕಾರಾಮ ಏನೆಕಲ್ಲು, ಎನ್.ಎಂ.ಸಿಯ ಪ್ರಾಂಶುಪಾಲ ರುದ್ರಕುಮಾರ್, ರಂಗ ಕರ್ಮಿ ಬಾಸುಮ ಕೊಡಗು, ಅಕಾಡೆಮಿ ಸದಸ್ಯ ಹಾಗೂ ನಾಟಕ ನಿರ್ದೆಶಕ ಲೋಕೇಶ್ ಊರುಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಸ್ವಾಗತಿಸಿ, ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಊರುಬೈಲ್ ವಂದಿಸಿದರು. The first performance of the semi-literate play ‘Appa’ kicks off – ತುಳು ಟೈಮ್ಸ್
ಇದನ್ನೂ ಓದಿ :ಉಜಿರೆಯ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಪವಾಡಗಳು ಅಚ್ಚರಿ ಮೂಡಿಸುತ್ತೆ..!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs











