ಬ್ರೇಕಿಂಗ್ ನ್ಯೂಸ್
ಧಾರ್ಮಿಕ

ತಿರುಪತಿ ದೇವಸ್ಥಾನಕ್ಕೆ ರೂ.9 ಕೋಟಿ ದೇಣಿಗೆ…!

ಆಂಧ್ರಪ್ರದೇಶ : Tulu Times | ತಿರುಪತಿ ತಿರುಮಲ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಧಾರ್ಮಿಕ ತೀರ್ಥಕ್ಷೇತ್ರ. ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇದೆ. ಇಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ವಿಶ್ವಪ್ರಸಿದ್ಧವಾಗಿದ್ದು, ಹಲವಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಆಂಧ್ರಪ್ರದೇಶ ಸರ್ಕಾರದ ನಿಯಂತ್ರಣದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ ಈ ದೇವಾಲಯವನ್ನು ನಡೆಸುತ್ತಿದೆ. ಟಿಟಿಡಿಯ ಮುಖ್ಯಸ್ಥರನ್ನು ಆಂಧ್ರ ಪ್ರದೇಶ ಸರ್ಕಾರ ನೇಮಿಸುತ್ತದೆ. ಈ ದೇಗುಲದಿಂದ ಬರುವ ಆದಾಯವನ್ನು ಆಂಧ್ರಪ್ರದೇಶ ಸರ್ಕಾರ ಬಳಸುತ್ತದೆ. ಅಪಾರ ಸಂಖ್ಯೆಯಲ್ಲಿ ಇಲ್ಲಿ ಭಕ್ತರು ಆಗಮಿಸುವ ಕಾರಣ ಒಂದಲ್ಲ ಒಂದು ರೀತಿಯಲ್ಲಿ ಈ ದೇವಾಲಯ ಹೆಸರುವಾಸಿಯಾಗಿದೆ. ಅಮೆರಿಕ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹9ಕೋಟಿ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಎಂ.ರಾಮಲಿಂಗ ರಾಜು ಎಂಬುವವರು ಪಿಎಸಿ-1, ಪಿಎಸಿ-2 ಮತ್ತು ಪಿಎಸಿ-3 ಕಟ್ಟಡಗಳ ನವೀಕರಣಕ್ಕಾಗಿ ₹9 ಕೋಟಿ ದೇಣಿಗೆ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ.ಆ‌ರ್.ನಾಯ್ಡು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾಯ್ಡು ಪೋಸ್ಟ್ ಹಂಚಿಕೊಂಡಿದ್ದು, ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಟಿಟಿಡಿಗೆ ನೀಡಿದ ದೇಣಿಗೆಗಾಗಿ ತಿರುಮಲ ತಿರುಪತಿ ದೇವಸ್ಥಾನದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆಯೂ 2012ರಲ್ಲಿ ರಾಜು ಅವರು ಟಿಟಿಡಿಗೆ ₹16 ಕೋಟಿ ದೇಣಿಗೆ ನೀಡಿದ್ದರು ಎಂದೂ ಸ್ಮರಿಸಿದ್ದಾರೆ. Rs. 9 crore donation to Tirupati Temple – ತುಳು ಟೈಮ್ಸ್

ಇದನ್ನೂ ಓದಿ :ಗೂಗಲ್ ಮೀಟ್ ಸರ್ವರ್ ಡೌನ್..ಬಳಕೆದಾರರ ಪರದಾಟ !

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/fsDB1Bql7n8?si=beZF1Mj-FLeZj6uF

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 4

You cannot copy content of this page