ಬ್ರೇಕಿಂಗ್ ನ್ಯೂಸ್
ಕರ್ನಾಟಕ

Chikkamagaluru : ಅಯ್ಯಪ್ಪಸ್ವಾಮಿ ಮಾಲೆ ಧರಿಸಿದಕ್ಕಾಗಿ ಕ್ಯಾಂಪಸ್ ನಿಂದ ಹೊರಗೆ

Chikkamagaluru : ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಜನಿವಾರ ತೆಗೆಸಿದ ವಿಚಾರವಾಗಿ ಇತ್ತೀಚೆಗಷ್ಟೇ ವರದಿಯಾಗಿತ್ತು. ಆದ್ರೆ, ಇಲ್ಲೊಂದು ಕಾಲೇಜಿನಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಕ್ಕೆ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಯೋರ್ವನನ್ನು ಕಾಲೇಜಿನಿಂದಲೇ ಹೊರ ಹಾಕಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮಾಲೆ ತೆಗೆದು ಕಾಲೇಜಿನ ಒಳಗೆ ಬಾ ;

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಘಟನೆ ನಡೆದಿದೆ. ದ್ವಿತೀಯ ಪಿಯು ವಿದ್ಯಾರ್ಥಿ ಇದೇ ಮೊದಲ ಬಾರಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಹೋಗಿದ್ದ. ಕಾಲೇಜು ಆಡಳಿತ ಮಂಡಳಿ ಮಾಲೆ ತೆಗೆದು ಕಾಲೇಜಿನ ಒಳಗೆ ಬಾ ಎಂದು ವಿದ್ಯಾರ್ಥಿಗೆ ಸೂಚಿಸಿದೆ. ವಿದ್ಯಾರ್ಥಿಗೆ ಮಾಲೆ ತೆಗೆದು ಬಾ, ಇಲ್ಲವಾದಲ್ಲಿ ಬೇಡ ಎಂದು ಕಾಲೇಜು ಕ್ಯಾಂಪಸ್‌ ನಿಂದಲೇ ವಿದ್ಯಾರ್ಥಿಯನ್ನು ಹೊರಕಳುಹಿಸಿದ್ದಾರೆ.

ಸರ್ಕಾರದಿಂದಲೇ ಸರ್ಕ್ಯೂಲರ್‌ ಕೂಡ ಇದೆ ;

ಕಾಲೇಜಿಗೆ ಅಥವಾ ಶಾಲೆಗೆ ಬರುವಾಗ ಎಲ್ಲಾ ಮಕ್ಕಳು ಒಂದೇ, ಎಲ್ಲರು ಸಮಾನರು ಕೂಡ. ಯಾವುದೇ ಜಾತಿ-ಧರ್ಮವನ್ನು ಬಿಂಬಿಸುವಂತೆ ಶಾಲಾ-ಕಾಲೇಜಿಗೆ ಬರುವಂತೆ ಇಲ್ಲ ಎಂದು ಸರ್ಕಾರದಿಂದಲೇ ಸರ್ಕ್ಯೂಲರ್‌ ಕೂಡ ಇದೆ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ಮನವೊಲಿಸಿ ವಿದ್ಯಾರ್ಥಿಯನ್ನು ಮತ್ತೆ ಕಾಲೇಜಿಗೆ ಕಳುಹಿಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :Kicha Sudeep: ಸುದೀಪ್ ವಿರುದ್ಧ ಮಾತನಾಡಿದ ಮಹಿಳೆಗೆ ಕಿಚ್ಚನ ಅಭಿಮಾನಿಗಳಿಂದ ಧಮ್ಕಿ.!

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/PDFUjSkFTZA?si=JMH85nvF-1Ww-kiz

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page