Parappana Agrahara Jail: ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ವಿಲಾಸಿ ಜೀವನದ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಂದು 2ನೇ ಬಾರಿಗೆ ನಟ ಧನ್ವೀರ್ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸತತ ಐದು ತಿಂಗಳಿನಿಂದ ಕೆಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿ!
ಪೊಲೀಸರ ಮಾಹಿತಿ ಪ್ರಕಾರ ಧನ್ವೀರ್ ಮೊಬೈಲ್‌ನಿಂದ ಕೆಲವರಿಗೆ ವೀಡಿಯೋಗಳು ಸೆಂಡ್ ಆಗಿರೋದು ಗೊತ್ತಾಗಿತ್ತು, ಹೀಗಾಗಿ ವೀಡಿಯೋ ವೈರಲ್ ಪ್ರಕರಣದಲ್ಲಿ ಧನ್ವೀರ್ ಪಾತ್ರದ ಬಗ್ಗೆ ಪೊಲೀಸರು ಸಂಶಯದಿಂದ ಇದ್ದರು, ಪೊಲೀಸರು ನಟ ಧನ್ವೀರ್ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್‌ನಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಆದರೆ, ಮೊಬೈಲ್ ರಿಟ್ರೀವ್ ರಿಪೋರ್ಟ್ ನಲ್ಲಿ, ಕೆಲ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿವೆ. ಹಾಗಾಗಿ ಮತ್ತೆ ಧನ್ವೀರ್ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಮೊಬೈಲ್ ರಿಟ್ರೀವ್ ಮತ್ತು ಪೊಲೀಸರ ವಿಚಾರಣೆಯಲ್ಲಿ ಹೊರಬರುವ ಅಂಶಗಳ ಮೇಲೆ ಧನ್ವೀರ್‌ಗೆ ಸಂಕಷ್ಟ ಎದುರಾಗುತ್ತಾ ಅಥವಾ ಪ್ರಕರಣದಿಂದ ಹೊರಬರುತ್ತಾರಾ ಅನ್ನೋದು ಕಾದುನೋಡಬೇಕು.
ಇದನ್ನೂ ಓದಿ: ಮಾರಾಟಗಾರರಿಗೆ ಶುಲ್ಕ ವಿನಾಯಿತಿ ನೀಡಲು ಮುಂದಾದ ‘ಫ್ಲಿಪ್ ಕಾರ್ಟ್’
ನಟ ಧನ್ವೀರ್ ಶೇರ್ ಮಾಡಿಕೊಂಡ ಪೋಸ್ಟ್ ನಲ್ಲಿ ಏನೇನಿದೆ..?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿದ್ದು, ಅಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ಸಿಗುತ್ತಿರುವ ವಿಡಿಯೋ ವೈರಲ್ ಆಗಿತ್ತು, ಈ ವೀಡಿಯೋ ದರ್ಶನ್ ಆಪ್ತ ನಟ ಧನ್ವೀರ್ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನ ಸಿಸಿಬಿ ಪೊಲೀಸರಿಗೆ ತಿಳಿದುಬಂದಿದೆ. ವಿಡಿಯೋ ರಿಲೀಸ್ ಆದ ನಂತರ, ನಟ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಜೊತೆಗೆ ನಿಂತಿರುವ ಫೋಟೋ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ಉಸಿರು ಇರುವವರೆಗೂ ಇರ್ತೀನಿ ನಿನ್ ಹಿಂದೆ ಎಂಬ ಕಾಟೇರಾ ಸಿನಿಮಾ ಹಾಡು ಹಾಕಿದ್ದರು. ಈ ಹಿಂದೆ ಇಲ್ಲಿ ಅಪರಾಧಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ, ದರ್ಶನ್ ಅವರನ್ನು ಜೈಲಿನಲ್ಲಿ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ. ಜೈಲಿನಲ್ಲಿ ಒಬ್ಬರಿಗೆ ಒಂದೊಂದು ನ್ಯಾಯ. ದರ್ಶನ್ ಅವರನ್ನು ಕೆಟ್ಟದಾಗಿ ನೋಡಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕೆಲವು ತಿಂಗಳಿನಿಂದಲೇ ಜೈಲಿನಲ್ಲಿ ಇರುವ ದರ್ಶನ್ ಗ್ಯಾಂಗ್ ಪ್ರತೀ ದಿನವೂ ಕಷ್ಟದ ದಿನಗಳನ್ನು ಅನುಭವಿಸುತ್ತಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











