ಬ್ರೇಕಿಂಗ್ ನ್ಯೂಸ್
ಕರಾವಳಿಬೆಳ್ತಂಗಡಿ

Belthangady: SIT ವಿರುದ್ಧವೇ ದೂರು ನೀಡಿದ ಜಯಂತ್‌ – ದೂರಿನಲ್ಲೇನಿದೆ?

Belthangady: ವಿಚಾರಣೆಗೆಂದು ಕರೆದ ಎಸ್‌ಐಟಿ ಅಧಿಕಾರಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜಯಂತ್‌ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದಿದ್ದಾರೆ. ವಿಚಾರಣೆ ವೇಳೆ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೆದರಿಕೆ ಹಾಕಿರುವುದಾಗಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಯಂತ್‌ ಆರೋಪವೇನು?
SIT ಅಧಿಕಾರಿಗಳಾದ ಸೈಮನ್, ಜಿತೇಂದ್ರ ದಯಾಮ, ಮಂಜುನಾಥ ಗೌಡ, ಮಂಜುನಾಥ್ ಆರ್.ಜೆ. ಹಾಗೂ ಗುಣಪಾಲ ಸೇರಿಕೊಂಡು ನನಗೆ ಬೆದರಿಕೆ ಹಾಕಿದರು. ಬಳಿಕ ದೂರುದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕವೂ ತೀವ್ರವಾಗಿ ಹಲ್ಲೆ ಮಾಡಿಸಿದ್ದಾರೆ. ಅದೇ ರೀತಿ ಚಿನ್ನಯ್ಯನ ಮೇಲೆಯೂ ಹಲ್ಲೆ ನಡೆಸಿ ನನಗೆ ಬೆದರಿಸಿ ಸುಳ್ಳು ಹೇಳಿಕೆ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು ಎಂದು ಜಯಂತ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

SIT ಅಧಿಕಾರಿಗಳ ನಡೆಯನ್ನು ಒಪ್ಪದಿದ್ದಾಗ ‘ದೊಡ್ಡವರ ವಿರುದ್ಧ ದೂರು ನೀಡುತ್ತಿಯಾ? ನಿನ್ನನ್ನು & ನಿನ್ನೊಂದಿಗೆ ಇರುವವರನ್ನು ಜೈಲಿಗೆ ಹಾಕದೆ ಬಿಡುವುದಿಲ್ಲ’ ಎಂದು ಬೆದರಿಸಿದ್ದಾರೆ. ಅಧಿಕಾರಿಗಳ ಹಲ್ಲೆಯಿಂದ ಗಾಯಗೊಂಡ ನಾನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದಿದ್ದೇನೆ ಎಂದು ಆರೋಪ ಮಾಡಿದ್ದಾರೆ.

ತನ್ನಿಂದ ಯಾವುದೇ ಹೇಳಿಕೆ ಪಡೆಯದೆ ಅವರಾಗಿಯೇ ಹೇಳಿಕೆಯನ್ನು ಟೈಪ್ ಮಾಡಿದ್ದಾರೆ. ಪ್ರತಿ ದಿನ SIT ಕಚೇರಿಗೆ ಕರೆಸಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಸುಳ್ಳು ಸಾಕ್ಷಿ ಹೇಳಿವಂತೆ ಒತ್ತಾಯಿಸಿದ್ದಾರೆ. SITಯಿಂದ ತನಗೆ ಬೆದರಿಕೆ ಇದ್ದ ಕಾರಣ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಲಭಿಸಿದ ಬಳಿಕ ಇದೀಗ ದೂರು ನೀಡಿದ್ದೇನೆ ಎಂದು ಜಯಂತ್ ಟಿ ತಿಳಿಸಿ, ತನ್ನ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ: Saalumarada Timmakka : ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕರಿಗೆ ಆಲದ ಸಸಿಗಳೇ ಮಕ್ಕಳು

================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 38

You cannot copy content of this page