Moodabidire: ಕ್ಯಾಂಟೀನ್ ಕೆಲಸ ಮಾಡುತ್ತಿದ್ದಾತನ ಕೊಲೆ ಮಾಡಿದ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಮೂಡಬಿದಿರೆಯ ಕಾಲೇಜೊಂದರಲ್ಲಿ ಕ್ಯಾಂಟೀನ್ ಕೆಲಸ ಮಾಡುತ್ತಿದ್ದ ಚೇತನ್ (22) ಕೊಲೆಯಾದ ಯುವಕ. ಚಿದಾನಂದ ಪರಶು ನಾಯ್ಕ ಕೊಲೆಗೈದ ಅಪರಾಧಿ. ಪರಶು ನಾಯ್ಕನಿಗೆ . ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ
2020ರಲ್ಲಿ ನಡೆದ ಪ್ರಕರಣ
ಕ್ಯಾಂಟೀನ್ನಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿದ್ದ ಚೇತನ್ ಮತ್ತು ಚಿದಾನಂದ ಎಂಬವರಿಗೆ ಕೆಲಸದ ವಿಚಾರದಲ್ಲಿ ಮತ್ತು ವೈಯುಕ್ತಿಕ ವಿಚಾರದಲ್ಲಿ ಪರಸ್ಪರ ತಕರಾರು ನಡೆದಿತ್ತು. 2020ರ ಅ. 10 ರಂದು ಮಧ್ಯರಾತ್ರಿ ಚೇತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ ಹಿಡಿದುಕೊಂಡು ಚೇತನ್ ವಿಶಾಂತ್ರಿ ಕೊಠಡಿಗೆ ಪರಶು ನಾಯ್ಕ ಅಕ್ರಮ ಪ್ರವೇಶ ಮಾಡಿದ್ದನು.
ಅಲ್ಲಿ ರಾಜೇಶ್ ಪೂಜಾರಿ ಮತ್ತು ಶಂಕ್ರಪ್ಪ ಜತೆ ನಿದ್ರಿಸುತ್ತಿದ್ದ ಚೇತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ರಾಡ್ನಿಂದ ತಲೆಗೆ, ಮುಖಕ್ಕೆ ಹಲ್ಲೆಗೈದಿದ್ದಾನೆ. ಅಷ್ಟಲ್ಲದೆ, ಮೊಬೈಲ್ ಫೋನ್ ಜಖಂಗೊಳಿಸಿದ್ದ. ಗಂಭೀರ ಗಾಯಗೊಂಡಿದ್ದ ಚೇತನ್ ಜೀವನ್ಮರಣದ ಹೋರಾಟ ನಡೆಸಿದ್ದ. ಒಂದು ತಿಂಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ಚೇತನ್ ನ. 9 ರಂದು ಮೃತಪಟ್ಟಿದ್ದರು. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ಬಿ.ಎಸ್ ದಿನೇಶ್ ಕುಮಾರ್ ಅಪರಾಧಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿದ್ದರು. ನ.1 ರಂದು ಪರಶು ನಾಯ್ಕ್ನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ 40 ಸಾಕ್ಷಿದಾರರನ್ನು ವಿಚಾರಣೆ ಮಾಡಿದ ನ್ಯಾಯಾಲಯ ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು.
ಇದನ್ನೂ ಓದಿ: Bengaluru: ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಲಕುಮಿ ಸೀರಿಯಲ್ ನಟಿ!
===============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











