ಬ್ರೇಕಿಂಗ್ ನ್ಯೂಸ್
ಸುಳ್ಯ

Kadaba : ನ.18 ರಂದು ಬೃಹತ್ ಹಕ್ಕೊತ್ತಾಯ ಸಭೆ

Kadaba : ಹಕ್ಕುಪತ್ರ ಪಡೆದುಕೊಂಡ ರೈತರಿಗೆ ಹಕ್ಕುಪತ್ರ ಅನಧಿಕೃತ ಎಂದು ತಿಳಿಸಿ, ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಸೂಚಿಸಲಾಗುತ್ತಿದೆ. ಈ ಕಾರಣ, ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಬೇಡಿಕೆಗಳನ್ನು ಮುಂದಿರಿಸಿ ನ.18ರಂದು ಬೆಳಗ್ಗೆ ಕಡಬದ ತಾಲೂಕು ಕಚೇರಿ ಬಳಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ತಿಳಿಸಿರುತ್ತಾರೆ.

ಅರಣ್ಯ ಹಾಗೂ ಕಂದಾಯ ನಡುವೆ ಸಮರ್ಪಕವಾಗಿ ಜಂಟಿ ಸರ್ವೇ ನಡೆಸದೇ, ಗಡಿ ಗುರುತು ಪ್ರಕ್ರಿಯೆ ನಡೆಸದೇ, ಪಶ್ಚಿಮ ಘಟ್ಟ ಹಾಗೂ ಗ್ರಾಮಗಳ ನಡುವೆ ಗಡಿ ಗುರುತು ಮಾಡದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ವಿರುದ್ದ ನಮ್ಮ ಬೇಡಿಕೆಗಳಾದ ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕು, ಕಂದಾಯ ಇಲಾಖೆ ನೀಡಿದ ಹಕ್ಕುಪತ್ರಗಳನ್ನು ಅಧಿಕೃತ ಮಾಡಬೇಕು ಎಂದು ಒತ್ತಾಯಿಸಿ ಹಕ್ಕೊತ್ತಾಯ ಸಭೆ ನಡೆಸಲಿದ್ದೇವೆ. ಆದ್ದರಿಂದ ಹಕ್ಕೊತ್ತಾಯ ಸಭೆಗೆ ತಾಲೂಕಿನ ಗ್ರಾಮಸ್ಥರು, ಸೊಸೈಟಿ ಪ್ರತಿನಿಧಿಗಳು, ಗ್ರಾಮ ಪಂಚಾಯತ್‌ ಚುನಾಯಿತರು ಭಾಗವಹಿಸಬೇಕು ಎಂದ ಅವರು, ಹಕ್ಕೊತ್ತಾಯ ಸಭೆ ನಿಟ್ಟಿನಲ್ಲಿ ನ.11ರಂದು ಪ್ರತೀ ಗ್ರಾಮಗಳಿಗೆ, ಗ್ರಾ.ಪಂ.ಗಳಿಗೆ ಸಂಘಟನೆ ವತಿಯಿಂದ ಭೇಟಿ ನೀಡಿ ಜಾಗೃತಿ, ಅರಿವು ಮೂಡಿಸಲಾಗುವುದು ಎಂದರು.

ಹಕ್ಕೊತ್ತಾಯ ಸಭೆಯಲ್ಲಿ ಡಿಸಿ, ಎಸಿ, ಅರಣ್ಯ ಇಲಾಖೆಯ ಜಿಲ್ಲಾ ಅಧಿಕಾರಿಗಳು ಆಗಮಿಸಿ ಅರಣ್ಯ ಸಮಸ್ಯೆಗಳ ಬಗ್ಗೆ ಪರಿಹಾರದ ಉತ್ತರ ನೀಡಬೇಕು ಹಾಗೂ ಬೇಡಿಕೆಗಳನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವ ಭರವಸೆ ನೀಡಿ, ಕಾರ್ಯಪ್ರವೃತರಾಗಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭ ಜಯಪ್ರಕಾಶ್ ಕೂಜುಗೋಡು, ಆಚ್ಚುತ ಗೌಡ, ರಮಾನಂದ ಎಣ್ಣೆಮಜಲು, ದಾಮೋದರ ಗುಂಡ್ಯ ಸೇರಿದಂತೆ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ :Viral News: ಬಿಕಿನಿ ತೊಟ್ಟು ಗಂಗಾಸ್ನಾನ ಮಾಡಿದ ಮಹಿಳೆ..!

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9fR6e9tLRSs?si=oeFOEtg8uLTHFOOH

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page