ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

Life: ಜೀವನದಲ್ಲಿ ನೊಂದು ಸೋತು ಜಿಗುಪ್ಸೆಗೆ ಜಾರಿದ್ದೀರಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

Life: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನ ತಮ್ಮ ಜೀವನದಲ್ಲಿ ನೋವುಗಳೆ ತುಂಬಿದೆ ಅಂತ ಜಿಗುಪ್ಸೆಗೆ ಜಾರುತ್ತಾರೆ ಇದರಿಂದ ಆರೋಗ್ಯವನ್ನು ಕಳೆದುಕೊಳ್ಳುವಂತಹ ಪ್ರಸಂಗ ಬರುತ್ತದೆ. ಹೀಗಾಗಿ ಇಂತಹ ಜನರು ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಲೇಬೇಕು. ಇದನ್ನು ಫಾಲೋ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು.

ನಿಮ್ಮ ಯೋಚನೆ ಪಾಸಿಟಿವ್ ಆಗಿರಲಿ!

ನಮ್ಮಲ್ಲಿ ಬಹುತೇಕ ಜನ ಬಹಳ ನೆಗೆಟಿವ್ ಆಗಿ ಯೋಚಿತ್ತಾ ಇರುತ್ತಾರೆ. ಅದೇನಿದ್ದರೂ ಕೂಡ ಸಣ್ಣಗೆ ಬೇಸರ ಮಾಡಿಕೊಳ್ಳುವುದು ಚಿಕ್ಕ ಪುಟ್ಟ ವಿಷಯಗಳನ್ನು ತಪ್ಪಾಗಿ ತಿಳಿದುಕೊಂಡು ಬಹಳ ನೆಗೆಟಿವ್ ಆಗಿ ಯೋಚನೆಯನ್ನು ಮಾಡುವ ಮಂದಿ ಬಹಳಷ್ಟು ಇದ್ದಾರೆ. ಇಂಥವರು ಒಂದು ಕ್ಷಣ ನಿಂತು ಪಾಸಿಟಿವ್ ಆಗಿ ಯೋಚನೆ ಮಾಡುವುದು ಒಳ್ಳೆಯದು. ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಬಹಳಷ್ಟು ಸಾರಿ ಯೋಚನೆ ಮಾಡುವುದು ಸೂಕ್ತ ಇದರಿಂದ ಯಾವುದೇ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ. ಇನ್ನು ಏನಾದರೂ ಕೆಲಸ ಕಾರ್ಯಗಳು ಮಾಡಬೇಕಾದರೆ ಪಾಸಿಟಿವ್ ಆಗಿ ಚಿಂತನೆ ನಡೆಸುವುದು ಬಹಳ ಮುಖ್ಯ. ಇದರಿಂದ ನೀವು ಕೈಗೊಳ್ಳುವಂತಹ ಕೆಲಸ ಕಾರ್ಯಗಳು ಬಹಳ ಸುಲಭವಾಗಿ ನಡೆಯುತ್ತದೆ. ಒಂದು ಕೆಲಸದ ಬಗ್ಗೆ ಮುಂಚೆಯೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ನಿಮ್ಮ ಮನಸ್ಸು ಪಾಸಿಟಿವ್ ಕಡೆಗೆ ವಾಲುತ್ತದೆ. ಅದೇ ರೀತಿ ಮುಂದಿನ ಕೆಲಸಗಳು ಕೂಡ ಅಷ್ಟೇ ಸಲೀಸಾಗಿ ನಡೆಯುತ್ತದೆ.

ಜೀವನದಲ್ಲಿ ನಿಮ್ಮವರನ್ನೂ ಖುಷಿಪಡಿಸಿ! 

ಕೆಲವೊಂದು ಸಮಯದಲ್ಲಿ ಏನಾದರೂ ಖುಷಿಯ ಸಂಗತಿ ಇದ್ದರೆ, ನಿಮ್ಮ ಪಾರ್ಟನರ್  ಜೊತೆಗೆ ಹಂಚಿಕೊಳ್ಳಿ. ಇದರಿಂದ ಇನ್ನೊಬ್ಬರ ಮುಖದಲ್ಲಿ ಮಂದಹಾಸ ಮೂಡುವ ಹಾಗೆ ನೀವು ಮಾಡುತ್ತೀರಿ. ನಿಮ್ಮ ಜೀವನವೂ ಬಹಳ ಸುಂದರವಾಗಿರುತ್ತದೆ. ನೀವು ಸಿಹಿಯನ್ನು ಹೇಗೆ ಹಂಚಿಕೊಳ್ಳುತ್ತೀರೋ ಅದೇ ರೀತಿ ಒಂದು ಖುಷಿಯ ಸಂಗತಿಯನ್ನು ನಿಮ್ಮ ಆತ್ಮೀಯ ಗೆಳೆಯ ಅಥವಾ ಗೆಳತಿಯ ಜೊತೆಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೂ ಖುಷಿಯಾಗುತ್ತದೆ. ಜೊತೆಗೆ ನಿಮ್ಮ ಜೊತೆ ಇದ್ದವರು ಕೂಡ ನಿಮ್ಮ ಸಂಗವನ್ನು ಇಷ್ಟಪಡುತ್ತಾರೆ. ಅದೇನೆ ಸಂದರ್ಭ ಇದ್ದರೂ ಕೂಡ ಅವರು ಕೂಡ ನಿಮ್ಮ ಜೊತೆ ಅದೇ ಬಾಂಧವ್ಯವನ್ನು ಮುಂದುವರಿಸುತ್ತಾರೆ. ಒಂದು ಬಾರಿ ನೀವು ನೆಗೆಟಿವ್ ಆಗಿ ಅವರ ಬಗ್ಗೆ ಯೋಚನೆ ಮಾಡಿದರೆ ಅದು ನಿಮ್ಮ ನೆಮ್ಮದಿ ಕೆಡಲು ಕಾರಣವಾಗುತ್ತದೆ. ಅಥವಾ ಅದು ನೀವು ಇನ್ನೊಬ್ಬ ವ್ಯಕ್ತಿಯನ್ನು ಕಳೆದುಕೊಳ್ಳಲು ಇದು ಕೂಡ ಒಂದು ದಾರಿಯಾಗುತ್ತದೆ. ಇದರಿಂದ ಅದೇನೇ ಸಂಗತಿ ಇದ್ದರೂ ಕೂಡ ನಿಮ್ಮನ್ನು ನಂಬಿರುವಂತಹ ಜೀವದ ಜೊತೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಜೊತೆಗೆ ಎಲ್ಲಾ ವಿಷಯವನ್ನು  ಅವರು ಕೂಡ ಹೇಳಿಕೊಳ್ಳಲು ಸುಲಭವಾಗುತ್ತದೆ. ಜೊತೆಗೆ ಯಾವುದೇ ಜಗಳ, ಗೊಂದಲಗಳು ಇರುವುದಿಲ್ಲ.

ನಿಮ್ಮ ಮಾತುಗಳು ನೇರವಾಗಿರಲಿ! ನೊಂದವರನ್ನು ನೋಯಿಸಬೇಡಿ!

ಕೆಲವೊಮ್ಮೆ ನಾವು ಏನಾದರೂ ವಿಚಾರಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತೇವೆ. ಅಥವಾ ಅವರು ಏನೆಂದುಕೊಳ್ಳುತ್ತಾರೋ ಅಂತ ನಾವು ಬೇಸರಪಡಿಸಿಕೊಳ್ಳುತ್ತೇವೆ. ಹೌದು ಕೆಲವೊಂದು ವಿಚಾರಗಳನ್ನು ನೀವು ನಿಮ್ಮ ಆತ್ಮೀಯ ಗೆಳೆಯ ಅಥವಾ ಗೆಳತಿಯ ಜೊತೆಗೆ ಓಪನ್ ಆಗಿ ಹೇಳುವುದು ಒಳ್ಳೆಯದು. ಇದರಿಂದ  ನಿಮ್ಮ ಕಷ್ಟಗಳಿಗೆ ಒಂದು ಪರಿಹಾರ ಸಿಗುತ್ತದೆ. ಹಾಗೆಯೇ ನೀವು ಪಾರದರ್ಶಕವಾಗಿ ಅವರ ಜೊತೆಗೆ ಮಾತನಾಡುತ್ತೀರಿ. ಇದರಿಂದ ಉಂಟಾದಂತಹ ಗೊಂದಲಗಳು ಕಡಿಮೆಯಾಗುತ್ತದೆ. ಯಾವುದೇ ವಿಚಾರಗಳು ಕೂಡ ಅತಿಯಾಗಿ ನಿಮ್ಮ ಮನಸ್ಸಿನಲ್ಲಿ ನೀವು ಅದುಮಿಟ್ಟುಕೊಂಡರೆ ನಿಮಗೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.  ನೀವು ನಿಮಗೆ ಇಷ್ಟವಾದಂತಹ ವ್ಯಕ್ತಿಯ ಜೊತೆಗೆ ಓಪನ್ ಆಗಿ ಮಾತನಾಡುವುದು ಒಳ್ಳೆಯದರು. ಇದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.  ಜೀವನದಲ್ಲಿ ಜಿಗುಪ್ಸೆ ಇದ್ದರೆ ಅದು ಕೂಡ ನಿಮ್ಮನ್ನು ಬಿಟ್ಟು ದೂರ ಓಡುತ್ತದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page