ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Udupi: ಸೈಲೆಂಟ್ ಆಗಿದ್ದ ಮಣಿಪಾಲದಲ್ಲಿ ಬಾಲಬಿಚ್ಚಿದ ಪುಂಡರು..!

Udupi: ಉಡುಪಿಯಲ್ಲಿ ವಿಕೇಂಡ್ ಹೆಸರಿನಲ್ಲಿ ಮಣಿಪಾದಲ್ಲಿ ವಿದ್ಯಾರ್ಥಿಗಳು  ದಾಂಧಲೆ ನಡೆಸಿರುವ ಘಟನೆ ನಡೆದಿದೆ.

ಸೈಲೆಂಟ್ ಆಗಿದ್ದ ಮಣಿಪಾಲದಲ್ಲಿ ಬಾಲಬಿಚ್ಚಿದ ಪುಂಡರು, ಮಣಿಪಾಲ ದ ಹೆಸರಾಂತ ಪಬ್ ಡೌನ್ ಟೌನ್ ನಲ್ಲಿ ಮಾರಾಮಾರಿ ನಡೆಸಿದ್ದಾರೆ. ಮಾರಾಮಾರಿಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಬ್ ಬಳಿ ನಡುರಸ್ತೆಯಲ್ಲಿ ಗ್ಯಾಂಗ್ ಹೊಡೆದಾಡಿಕೊಂಡಿದೆ.

ಇದನ್ನೂ ಓದಿ: Kempegowda ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್‌; ಬಿಜೆಪಿ ಗರಂ

ಹೊಡೆದಾಟದ ವೇಳೆ ಓರ್ವ ಯುವಕನಿಗೆ ರಕ್ತ ಬರುವಂತೆ ಥಳಿಸಲಾಗಿದೆ. ಈ ಮೊದಲ ಎಸ್ಪಿ ಅರುಣ್ ಕುಮಾರ್ ಮಣಿಪಾಲದ ಪಬ್ ಕಲ್ಚರ್ ಗೆ ಬ್ರೇಕ್ ಹಾಕಿದ್ದರು, ಮಣಿಪಾಲದ ಹಿಂದಿನ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ವೀಕೆಂಡ್ ಡ್ರೈವ್ ಮಾಡಿ ಎಚ್ಚರಿಕೆ ನೀಡಿದ್ದರು. ಮಣಿಪಾಲದ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಅಳವಡಿಸಿ ತಪಾಸಣೆ ನಡೆಸುತ್ತಿದ್ದರು. ಸಮಯ ಮೀರಿ ನಡೆಸಲಾಗುತ್ತಿದ್ದ ಮತ್ತು ಅನುಮತಿ ಇಲ್ಲದ ಪಬ್ ಗಳಿಗೆ ಬೀಗ ಜಡಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ಮತ್ತೆ ಪಬ್ ಕಲ್ಚರ್ ಹೆಚ್ಚಾಗಿದೆ ಎನ್ನುವ ದೂರುಗಳು ಕೇಳಿ ಬಂದಿತು. ಈ ದೂರಿಗೆ ಸಾಕ್ಷಿ ಎನ್ನುವಂತೆ ಪಬ್ ನಲ್ಲಿ ನಡೆದ ಗಲಾಟೆ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಸರಕಾರಿ ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್…!

ನಿನ್ನೆ ತಡರಾತ್ರಿ ನಡೆದ ಘಟನೆಯಿಂದ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಿಗ್ಗಾ ಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳುರಕ್ತ ಬರುವಂತೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣ ಉಡುಪಿ ತಾಲೂಕಿನ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ 18 ಸಾವಿರ ಶಿಕ್ಷಕರ‌ ನೇಮಕ ಪ್ರಕ್ರಿಯೆ ನಡೆಯುತ್ತಿದೆ..!

ಉಡುಪಿ ಮತ್ತು ದಕ್ಷಿಣ ಕನ್ನಡ ಕರಾವಳಿ ಜಿಲ್ಲೆಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ, ಸಣ್ಣ ಘಟನೆಗಳು  ಉದ್ವಿಗ್ನತೆಗೆ ಕಾರಣವಾಗಿದೆ. ಈ ಹಿಂದೆ ಮೇ 2024 ರಲ್ಲಿ, ಕಾರಿನ ದುರ್ಬಳಕೆಯ ಬಗ್ಗೆ ಎರಡು ಗುಂಪುಗಳ ನಡುವೆ ನಡೆದ ಬೀದಿ ಗಲಾಟೆಯ ಘಟನೆ ವರದಿಯಾಗಿತ್ತು.  ಅದಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಹಿಂದೆ ಉಡುಪಿಗೆ ಇದ್ದ ‘ಕೋಮು’ ಎಂಬ ಹಣೆಪಟ್ಟಿಯನ್ನು ಇತ್ತೀಚೆಗೆ ತೆಗೆದುಹಾಕಲಾಗಿದೆ ಎಂದು ಉಡುಪಿಯ ಮಾಜಿ ಜಿಲ್ಲಾಧಿಕಾರಿ ಹೇಳಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page