Rishab Shetty: ಕಾಂತಾರಾ ಚಾಪ್ಟರ್ 1 ವಿಶ್ವದಾಖಲೆ ಮಾಡುತ್ತಿರುವ ಬೆನ್ನಲ್ಲೇ ಇದೀಗ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಇಂದು ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ: ಮದುವೆ ಬೇಡ ಅಂತ ನಿರ್ಧಾರ ತಗೊಂಡಿದ್ದೀರಾ..? ಹಾಗಾದ್ರೆ ಈ ಸ್ಟೋರಿ ನಿಮಗಾಗಿ..!
ಪತ್ನಿ ಜೊತೆ ಬಂದು ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿ!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಸ ಹಿ ಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಸಿನಿಮಾಕ್ಕೆ ಈ ಹಿಂದೆಯೇ ರಾಜ್ಯ ಪ್ರಶಸ್ತಿ ಘೋಷಣೆ ಆಗಿತ್ತು. ಹೀಗಾಗಿ, ಈ ಪ್ರಶಸ್ತಿಯನ್ನು ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಜೊತೆಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಪ್ರಶಸ್ತಿ ಪಡೆದ ನಂತರ ಮಾತನಾಡಿದ ರಿಷಭ್ ಶೆಟ್ಟಿ, ಸಿದ್ದರಾಮಯ್ಯ ಅವರು ತಮ್ಮ ‘ಸ.ಹಿ.ಪ್ರಾ ಶಾಲೆ ಕಾಸರಗೋಡು ಸಿನಿಮಾವನ್ನು 2018 ರಲ್ಲಿ ಮೈಸೂರಿನಲ್ಲಿ ನೋಡಿದ್ದನ್ನು ನೆನಪು ಮಾಡಿಕೊಂಡು ತನಗೆ ಬಂದ ಪ್ರಶಸ್ತಿಯ ಬಗ್ಗೆ ಗೌರವಪೂರ್ವಕವಾಗಿ ಮಾತನಾಡಿದರು.
ಇದನ್ನೂ ಓದಿ: ಒಂದು ವರ್ಷ ಫ್ರೀ ಯಾಗಿ ‘ಚಾಟ್ ಜಿಪಿಟಿ ಗೊ’ : ದೇಶದ ಬಳಕೆದಾರರಿಗೆ ಹೊಸ ಆಫರ್
ಗಡಿನಾಡ ಕನ್ನಡ ಶಾಲೆಗಳ ಪರಿಸ್ಥಿತಿ ಬಗ್ಗೆ ಸಿನಿಮಾ ತೋರಿಸಿತ್ತು…!
ಇನ್ನು ಈ ಚಲನಚಿತ್ರವು ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಮತ್ತು 2019 ರಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಅಲ್ಲಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಈ ಚಿತ್ರವು ವಿವರಿಸುತ್ತದೆ. ಇನ್ನು ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ಬರೆದು, ನಿರ್ದೇಶಿಸಿ, ನಿರ್ಮಿಸಿದ್ದಾರೆ. 2019 ರಲ್ಲಿ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ.ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು, ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನಡೆದಿವೆ.
ಇದನ್ನೂ ಓದಿ: ನೀನು ನಿನ್ನ ಪಾಡಿಗೆ ಇದ್ಬಿಡು..ಪ್ಲೀಸ್..ಸೂರಜ್ ಗೆ ರಾಶಿಕಾ ಡೈರೆಕ್ಟ್ ಹೇಳಿದ್ಯಾಕೆ..?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











