ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಬಿಗ್‌ ಬಾಸ್‌ ಮನೆಯಿಂದ ಹೊರಟ ಮಲ್ಲಮ್ಮನಿಗೆ ಕಣ್ಣೀರಿನ ಬೀಳ್ಕೊಡುಗೆ ಕೊಟ್ಟ ಧ್ರುವ ರಕ್ಷಿತಾ..!

BBK12: ಬಿಗ್‌ ಬಾಸ್‌ ಮನೆಯಿಂದ ಈ ವಾರ ಮಲ್ಲಮ್ಮ ಮನೆಯಿಂದ ಔಟ್‌ ಆಗಿದ್ದಾರೆ. ಈ ವೇಳೆ ಧ್ರುವ ಹಾಗೂ ರಕ್ಷಿತಾ ಶೆಟ್ಟಿ ಬೇಸರದಿಂದ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಫೇಕ್‌ ಎಂದವ್ರಿಗೆ ಕಿಚ್ಚ ಸುದೀಪ್‌ ಕ್ಲಾಸ್..!

ಮಲ್ಲಮ್ಮನನ್ನು ತಬ್ಬಿಕೊಂಡು ಅತ್ತ ಧ್ರುವ ರಕ್ಷಿತಾ…!

ಬಿಗ್‌ ಬಾಸ್‌ ಮನೆಯಲ್ಲಿ ಧ್ರುವ ಹಾಗೂ ರಕ್ಷಿತಾ ಜೊತೆ ಮಲ್ಲಮ್ಮ ಆತ್ಮೀಯವಾಗಿ ಇದ್ದರು. ಇನ್ನು ಮಲ್ಲಮ್ಮ ಹೊರ ಹೋಗ್ತಾರೆ ಅಂತ ಅನೌಂಸ್‌ ಮಾಡಿದ್ದ ತಕ್ಷಣವೇ ಧ್ರುವ ಕಣ್ಣೀರು ಹಾಕಿದ್ದಾರೆ. ಹಾಗಾಗಿ ಮಲ್ಲಮ್ಮ ಕಣ್ಣೀರು ಒರೆಸುತ್ತಾರೆ. ಮಲ್ಲಮ್ಮ ಎಲಿಮಿನೇಟ್ ಎಂಬುದು ಗೊತ್ತಾದ ತಕ್ಷಣ ಮಾಳು, ಇದು ಎಷ್ಟು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ನನ್ನ ಬದಲು ಮಲ್ಲಮ್ಮನೇ ಈ ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ. ಆ ವೇಳೆ ಸುದೀಪ್, ನಿಮ್ಮ ಮುಗ್ಧತೆಗೆ, ನಿಮ್ಮ ಒಳ್ಳೆಯತನದ ಬಗ್ಗೆ ಗೌರವ ಇದೆ. ಆದರೆ ಹೊರಗೆ ವೋಟ್ ಹಾಕಿರುವ ಜನರಿಗೆ. ನಾಮಿನೇಷನ್ ಮಾಡುವುದು ನೀವಾಗಿರುವುದು, ಆದರೆ ತೀರ್ಮಾನ ಮಾಡುವುದು ಜನರು ಮಾತ್ರ ಎಂದರು. ಧ್ರುವ ಮಲ್ಲಮ್ಮನ ಜೊತೆಗೆ ಹೆಚ್ಚಾಗಿ ಮಾತನಾಡುತ್ತಿದ್ದರು, ಅಮ್ಮ ಅಂತ ಜೊತೆಗೆ ಇದ್ದುಕೊಂಡು ಸಲಹೆ ಕೊಡುತ್ತಿದ್ದರು. ರಕ್ಷಿತಾ ಜೊತೆಗೂ ಮಲ್ಲಮ್ಮ ಓಪನ್‌ ಆಗಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ತುಳುನಾಡ ಕಾರ್ಣಿಕದ ಕ್ಷೇತ್ರ ಶಿರಾಡಿ ಗಡಿ ಚೌಡೇಶ್ವರಿ ಅಮ್ಮ..!

ಆ ವಂದತಿಯೇ ಮಲ್ಲಮ್ಮ ಆಚೆ ಹೋಗಲು ಕಾರಣವಾಯ್ತಾ..?

ಇನ್ನು ಮಲ್ಲಮ್ಮ ಮನೆಯಿಂದ ಈಗಾಗಲೇ ಆಚೆ ಹೋಗಿದ್ದಾರೆ ಎಂದು ವದಂತಿ ಹಬ್ಬಿತ್ತು. ಮಲ್ಲಮ್ಮ ಅವರ ಕುಟುಂಬದಲ್ಲಿ ಮಗು ಜನಿಸಿದೆ ಹಾಗಾಗಿ ಮಲ್ಲಮ್ಮ ಈಗಾಗಲೇ ಮನೆಯಿಂದ ಆಚೆ ಹೋಗಿದ್ದಾರೆ ಎಂದು ಈ ಹಿಂದೆಯೇ ಜನ ಮಾತನಾಡಿಕೊಳ್ಳುತ್ತಿದ್ದರು. ಆದರೂ ಮನೆಯಲ್ಲಿ ಕಾಣಿಸಿಕೊಂಡಿದ್ದ ಮಲ್ಲಮ್ಮನ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಇದೀಗ ನಿಜವಾಗಲೂ ಮಲ್ಲಮ್ಮ ವಾರದ ಕೊನೆಯಲ್ಲಿ ಹೊರ ನಡೆದಿದ್ದಾರೆ. ಸತತ ಮೂವತ್ತು ದಿನಗಳ ಕಾಲ ಮನೆಯಲ್ಲಿದ್ದ ಮಲ್ಲಮ್ಮ ಅವರು ಮುಗ್ಧತೆಯಿಂದ ಮನೆಯಲ್ಲಿ ಇದ್ದು ಆಟಗಳನ್ನು ಗೊತ್ತಾಗದಿದ್ದರೂ ಹೇಗೂ ಕೇಳಿಕೊಂಡು ಕೊಂಚ ಕಷ್ಟಪಟ್ಟು ಆಡುತ್ತಿದ್ದರು. ಆದರೆ ಅನಿವಾರ್ಯವಾಗಿ ಮನೆಯಿಂದ ಹೋಗಬೇಕಾಯಿತು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page