Lucknow: ತನ್ನ ಪ್ರೇಯಸಿಯನ್ನು ಆಕೆಯ ಮನೆಯವರು ಬಲವಂತವಾಗಿ ಮದುವೆ ಮಾಡುತ್ತಿದ್ದಾರೆಂದು ತಿಳಿದು ಸ್ಥಳಕ್ಕೆ ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರವಿ (35) ಹತ್ಯೆಗಿಡಾದ ವ್ಯಕ್ತಿ. ಆತನ ಪ್ರೇಯಸಿ ಮನಿಷಾಳಿಗೆ ಬಲವಂತವಾಗಿ ಆಕೆಯ ಮನೆಯವರು ಮದುವೆ ಮಾಡಲಾಗುತ್ತಿದ್ದಾರೆ ಎಂದು ತಿಳಿದು, ಆಕೆಯನ್ನು ಭೇಟಿಯಾಗಲು ಹೋಗಿದ್ದ. ಆದರೆ, ಹುಡುಗಿ ಮನೆಯವರು ಆತನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರವಿ ಕುಡಿಯಲು ನೀರು ಕೇಳಿದ್ದಾನೆ. ಆದರೆ, ಯಾರು ಸಹ ನೀರು ನೀಡಲಿಲ್ಲ. ನಂತರ ಆತ ಮೃತಪಟ್ಟಿದ್ದಾನೆ. ಅವನು ಮೃತನಾದ ನಂತರ ಹಲ್ಲೆ ನಡೆಸಿದವರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ.
ಹುಡುಗಿಯ ಚಿಕ್ಕಪ್ಪ ಪಿಂಟು ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ರವಿ ಮತ್ತು ಪಿಂಟು ಅವರನ್ನು ಮೌದಾಹದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ವೈದ್ಯರು ರವಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಪಿಂಟುನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿ ಮೃತಪಟ್ಟ ಸುದ್ದಿ ತಿಳಿದು ಪ್ರೇಯಸಿ ಮನಿಷಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹುಡುಗಿ ಮತ್ತು ಆಕೆಯ ಚಿಕ್ಕಪ್ಪ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆಕೆಯನ್ನು ಮೌದಹಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಇದನ್ನೂ ಓದಿ : Belthangady: ಕಾರು – ಬೈಕ್ ಭೀಕರ ಅಪಘಾತ; ಯುವಕ ಮೃತ್ಯು
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











