ಬ್ರೇಕಿಂಗ್ ನ್ಯೂಸ್
ಪುತ್ತೂರು

ಪುತ್ತೂರು : ಪಿಕಪ್ ವಾಹನ ಉರುಳಿ ಚಾಲಕ ಸ್ಥಳದಲ್ಲೇ ಸಾವು

ಪುತ್ತೂರು : Tulu Times l ತೆಕ್ಕಾರ ಗ್ರಾಮದ ಕನರಾಜೆ ಪ್ರದೇಶದಲ್ಲಿ ಬುಧವಾರ ಫೆಬ್ರವರಿ 11ರಂದು ಪಿಕಪ್ ವಾಹನ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಕೆಲಸದ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಮೇಲಿನ ರಸ್ತೆಯಿಂದ ಕೆಳಗಿನ ರಸ್ತೆಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿದ್ದ ಅಲಕ್ಕೆಯ ನಿವಾಸಿ ಹರಿಶ್ಚಂದ್ರ ಅವರ ಪುತ್ರ ಹೇಮಚಂದ್ರ (32) ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರಾದ ಉಮ್ಮರಬ್ಬ (51) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಹೇಮಚಂದ್ರ ಅವಿವಾಹಿತರಾಗಿದ್ದು, ತಮ್ಮ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದು,‌ ಈ ಘಟನೆಯಿಂದ ಮನೆಯವರಿಗೆ ತೀವ್ರ ಆಘಾತವಾಗಿದೆ. ಘಟನೆ ಸಂಬಂಧ ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur: Pickup vehicle overturns, driver dies on the spot – ತುಳುಟೈಮ್ಸ್

ಇದನ್ನೂ ಓದಿ : ಬೆಳ್ತಂಗಡಿ: ಶಾಲಾ ಮಕ್ಕಳನ್ನು ಪಿಕಪ್ & ಟಿಪ್ಪರ್ ನಲ್ಲಿ ಕರೆದೊಯ್ದ ಬಗ್ಗೆ ಜನ ಆಕ್ರೋಶ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/RAMITjaI1nw?si=m3RDUqOpOFN-bDS2

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page