ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸುಬ್ರಮಣ್ಯ : ಮಾರ್ಚ್ ನಲ್ಲಿ ಸಂಭವಿಸೋ ಚಂದ್ರಗ್ರಹಣ ಸಂದರ್ಭ ಇಲ್ಲಿ ಯಾವೆಲ್ಲಾ ಸೇವೆಗಳು ಇರೋದಿಲ್ಲ ?

ಸುಬ್ರಮಣ್ಯ : Tulu Times l ಮಾರ್ಚ್ (ಮಾ. 03.2026) ತಿಂಗಳ ಮೊದಲ ವಾರದಲ್ಲಿ ಸಂಭವಿಸಲಿರುವ ಚಂದ್ರಗ್ರಹಣದ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಮತ್ತು ಸೇವಾದಿಗಳ ಸಮಯದಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಅಧಿಕೃತ ಪ್ರಕಟಣೆಯಂತೆ, ಮಾರ್ಚ್ 02 ಹಾಗೂ 03 ರಂದು ದೇವಾಲಯದಲ್ಲಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸಲಾಗುವುದಿಲ್ಲ. ಚಂದ್ರಗ್ರಹಣದ ಕಾರಣದಿಂದಾಗಿ ಆ ದಿನ ಯಾವುದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ.

ಭಕ್ತರು ಈ ಸಮಯ ಬದಲಾವಣೆಯನ್ನು ಗಮನದಲ್ಲಿರಿಸಿ ;

ಆ ದಿನದ ಮಧ್ಯಾಹ್ನದ ಮಹಾಪೂಜೆಯನ್ನು ಬೆಳಗ್ಗೆ 8.00 ಗಂಟೆಗೆ ನಡೆಸಲಾಗುವುದು. ಬಳಿಕ 9 ಗಂಟೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುವುದು. ರಾತ್ರಿ 7.00 ಗಂಟೆಯ ನಂತರ ದೇವಾಲಯದಲ್ಲಿ ಪೂಜೆ ನಡೆಯಲಿದೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ ಭೋಜನ ಸಂಪೂರ್ಣವಾಗಿ ನಿಷಿದ್ಧವಾಗಿದೆ. ಭಕ್ತರು ದೇವಾಲಯಕ್ಕೆ ಆಗಮಿಸುವ ಮುನ್ನ ಈ ಸಮಯ ಬದಲಾವಣೆಗಳು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕೆಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ

ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ರಾಹು ಹಾಗೂ ಕೇತುವನ್ನು ಅಶುಭ ಎಂದು ಹೇಳುತ್ತಾರೆ. ಸೂರ್ಯನನ್ನು ರಾಹು ನುಂಗಿದಾಗ, ಸೂರ್ಯಗ್ರಹಣ ಚಂದ್ರನನ್ನು ನುಂಗಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣ ಸಮಯವನ್ನು ಕೆಟ್ಟ ಸಮಯ ಎಂದು ಪರಿಗಣಿಸಲಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಗ್ರಹಣ ಸಮಯದಲ್ಲಿ ಭೂಮಿ ಮೇಲೆ ನೇರವಾಗಿ ನೇರಳಾತೀತ ಕಿರಣಗಳು ಬೀಳುತ್ತವೆ. ಈ ಕಿರಣಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವಿದ್ವಾಂಸರು ಹೇಳುತ್ತಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ದೇವಾಲಯಗಳೊಳಗೆ ಕೆಟ್ಟ ಶಕ್ತಿಗಳು ಪ್ರವೇಶಿಸುವ ಅವಕಾಶ ಹೆಚ್ಚು ಇರುತ್ತದೆ. ದೇವಾಲಯಗಳಲ್ಲಿ ವಿಗ್ರಹಗಳು ಕೂಡ ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ದೇವಾಲಯಗಳ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎನ್ನಲಾಗಿದೆ.

Subramanya: What services will not be available here during the lunar eclipse in March? – ತುಳುಟೈಮ್ಸ್

ಇದನ್ನೂ ಓದಿ : ತುಳುನಾಡಿನ ಕೆಡ್ಡಸ ಆಚರಣೆ : ಭೂಮಾತೆಗೆ ವಿಶ್ರಾಂತಿಯ ದಿನ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=6MLXc-oxAkzNdZWU

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page