ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ನೇತ್ರಾವತಿ ನದಿಯಲ್ಲಿ ತೇಲಿಕೊಂಡು ಮೃತದೇಹ ಪತ್ತೆ

ಪಾಣೆಮಂಗಳೂರು: Tulu Times | ಪಾಣೆಮಂಗಳೂರಿನ ಕಂಚಿಕಾರಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

ದೋಣಿ ಸಹಾಯದಿಂದ  ಕೂಡಲೇ  ಸ್ಥಳೀಯರ ನೆರವಿನಿಂದ ದಡಕ್ಕೆ ತರಲಾಯಿತು. ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ (35) ಮೃತ ವ್ಯಕ್ತಿ ಎನ್ನಲಾಗಿದೆ. ಕಂಚಿಕಾರಪೇಟೆ ಸೇತುವೆ ಬಳಿ ನದಿ ಮಧ್ಯೆ ತೇಲಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ಸಂಚು!

ಮಂಗಳೂರಿನಲ್ಲಿ ಸ್ಕೂಟರ್ ಹಿಂಬದಿ ಸವಾರೆಯ ಸಾವಿನ ನ್ಯಾಯಕ್ಕಾಗಿ ಜನ ಆಕ್ರೋಶ !

ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ, ನಂತೂರು ವೃತ್ತದ ಬಳಿ ಸ್ಕೂಟರ್ ಗೆ ಸಿಟಿ ಬಸ್ ಢಿಕ್ಕಿಯಾಗಿ ಹಿಂಬದಿ ಸವಾರೆ ಮೃತಪಟ್ಟಿರುವ ಬಗ್ಗೆ ಯುವತಿಯ ಮೃತದೇಹವನ್ನು ತಂದು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತಪಟ್ಟವರು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎನ್ನಲಾಗಿದೆ.

ಇತ್ತೀಚೆಗೆ ಸ್ಕೂಟರ್ ಗೆ ಸಿಟಿ ಬಸ್ ಢಿಕ್ಕಿಯಾಗಿ ಹಿಂಬದಿ ಕುಳಿತಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಹಿಂಬದಿ ಸವಾರವಾರೆಯಾಗಿದ್ದ ಯುವತಿಯ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇದೀಗ ಸಾವಿಗೆ ನ್ಯಾಯ ಒದಗಿಸುವಂತೆ ಯುವತಿಯ ಮೃದೇಹವನ್ನಿಟ್ಟುಕೊಂಡು ತಂದು ಸ್ಥಳೀಯರು ರಸ್ತೆ ತಡೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿಯ ಯುವತಿ ನಾಪತ್ತೆ ಕೇಸ್ ದಾಖಲು!

ಉಪ್ಪಿನಂಗಡಿ: ಪ್ರತ್ಯೇಕ ಪ್ರಕರಣದಲ್ಲಿ ಫೆ.03 ರಂದು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ಯುವತಿ ಸುಪ್ರೀತಾ(20) ಮನೆಯಿಂದ ನಾಪತ್ತೆಯಾಗಿದ್ದಾಳೆ.

ಮಂಗಳವಾರ ನಸುಕಿನ ಜಾವದಿಂದ ನಾಪತ್ತೆಯಾಗಿರುವ ಯುವತಿ, ಫೆ.2 ರಂದು ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವರು ಮರುದಿನ ನಸುಕಿನ ವೇಳೆ ಕಾಣಿಸದೇ ಇದ್ದು ಮೊಬೈಲ್ ಫೋನ್ ಕರೆಯೂ ಸ್ವೀಕರಿಸಿರಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ಮನೆಯವರು ಹೇಳಿದ್ದಾರೆ. ದಿ. ಶೀನಪ್ಪ ಎಂಬವರ ಮಗಳಾಗಿದ್ದು, ಹತ್ತನೇ ತರಗತಿಯ ವರೆಗೆ ಕಲಿತಿರುವ ಈಕೆ 4 ಅಡಿ 6 ಇಂಚು ಎತ್ತರವಿದ್ದು ಸಪೂರ ಶರೀರ, ಉರುಟು ಮುಖವನ್ನು ಹೊಂದಿರುತ್ತಾರೆ. ಕನ್ನಡ ತುಳು ಭಾಷೆಯನ್ನು ಮಾತನಾಡುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಈಕೆಯ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಸುಕೇಶ್ ಎಸ್ ತಿಳಿಸಿದ್ದಾರೆ.

Body found floating in Netravati river- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 138

You cannot copy content of this page