ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಂಟ್ವಾಳ: ನನ್ನ ಮೇಲೆ ಮಾವ ಹಲ್ಲೆ, ಜೀವಬೆದರಿಕೆ ನೀಡುತ್ತಿದ್ದಾರೆ..ಮಹಿಳೆ ದೂರು!

ಬಂಟ್ವಾಳ: Tulu Times | ಅನುಚಿತವಾಗಿ ವರ್ತಿಸಿ ಮಾವ ನನ್ನ  ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ  ಮಹಿಳೆಯೊಬ್ಬರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಪ್ರವಾಸಿ ಬಸ್‌ ಆರಂಭಕ್ಕೆ ಜನರ ಆಗ್ರಹ

ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ..?

ರಾತ್ರಿಯ ವೇಳೆ  7.30 ಗಂಟೆಗೆ ಮಾವ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ, ನಂತರ ಮಾವನಿಂದ ತಪ್ಪಿಸಿಕೊಂಡು ಆಚೆ ಬಂದಾಗ  ತನ್ನ ಗಂಡನೂ  ತಂದೆಯ ಪರವಾಗಿ ವರ್ತಿಸಿ, ಚಿಕಿತ್ಸೆ ಕೊಡಿಸಲು ನಿರಾಕರಿಸಿರುತ್ತಾರೆ ಎಂದು ಮಹಿಳೆ ದೂರಿದ್ದಾಳೆ. ಮಹಿಳೆಯ ತಂದೆ-ತಾಯಿ ಅವರನ್ನು ಸಂಪಾಜೆ ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ  ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್-ಬ್ರಹ್ಮಾವರ ಬಾಲಕಿಯ ಚಿನ್ನದ ಬೇಟೆ

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಹೆಡ್ ಕಾನ್ಸ್ ಟೇಬಲ್‌ ಸಾವು

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಹಾವೇರಿ ಮೂಲದ ಮಾರುತಿ ಲಮಾಣಿ(36) ನಿಧನರಾಗಿದ್ದಾರೆ. ಮಂಗಳೂರು ನಗರ ಸಶಸ್ತ್ರದಳದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಇವರು ಹೈವೇ ಪೆಟ್ರೋಲಿಂಗ್ ಮಾಡುವ ಕಾರಿನಲ್ಲಿ ಡ್ರೈವರ್ ಆಗಿ ಕರ್ತವ್ಯದಲ್ಲಿದ್ದರು.

ಇದನ್ನೂ ಓದಿ: ಕೇಂದ್ರ ಬಜೆಟ್ ಜನಹಿತದಿಂದ ಕೂಡಿದೆ: ಆರ್.ಅಶೋಕ್

ಮಾರುತಿ ಸಿಎಆರ್ ಯುನಿಟ್ ನಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದಿದ್ದರು. ಮೃತ ಮಾರುತಿ, ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಇವರ ಪತ್ನಿಯೂ ಕದ್ರಿ ಠಾಣೆಯಲ್ಲಿ ಕಾನ್ಸ್‌ ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರುತಿ ಲಮಾಣಿ ಮನೆಗೆ ಬಂದು ಮಲಗಿದ್ದರು ಈ ಸಂದರ್ಭದಲ್ಲಿ ಮಾರುತಿ ಅಸ್ವಸ್ಥರಾಗಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರುತಿ ಲಮಾಣಿ ಸಾವನಪ್ಪಿದ್ದಾರೆ ಎನ್ನಲಾಗಿದೆ.

Bantwal: My father-in-law is attacking me and threatening my life.. Woman complains!- ತುಳುಟೈಮ್ಸ್

ಇದನ್ನೂ ಓದಿ: ಉಡುಪಿ ಕಾಂಗ್ರೆಸ್‌ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page