ಬ್ರೇಕಿಂಗ್ ನ್ಯೂಸ್
ದೇಶ

ಸಾಕು ನಾಯಿಗಾಗಿ ಸೂಸೈಡ್ ಮಾಡಿಕೊಂಡ ಸಹೋದರಿಯರು !

ಸೂಸೈಡ್ : Tulu Times | ನಾವು ಪ್ರೀತಿಸಿದ ವ್ಯಕ್ತಿ ನಮ್ಮಿಂದ ದೂರವಾದರೆ ಕೆಲವರು ಆತ್ಮಹತ್ಯೆಯ ಮೊರೆ ಹೋಗುವುದನ್ನು ಗಮನಿಸಿದ್ದೇವೆ. ಆದರೆ, ಇಲ್ಲೊಂದು ಘಟನೆ ನಿಜಕ್ಕೂ ವಿಚಿತ್ರವಾಗಿದೆ. ಪ್ರೀತಿಯ ಸಾಕು ನಾಯಿಯ ದೀರ್ಘಕಾಲದ ಅನಾರೋಗ್ಯದಿಂದ ತೀವ್ರವಾಗಿ ನೊಂದ ಇಬ್ಬರು ಸಹೋದರಿಯರು ಫಿನೈಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಲಕ್ನೋದಲ್ಲಿ ನಡೆದಿದೆ.

ಇಬ್ಬರು ಸಹೋದರಿಯರು ಒಂದೇ ತೆರನಾದ ತೀರ್ಮಾನದ ಜೊತೆ ಸಾಕು ನಾಯಿಗಾಗಿ ಪ್ರಾಣ ತೆತ್ತ ವಿಚಾರ ನಿಜವಾಗಿಯೂ ಆಶ್ಚರ್ಯ ತರುವಂತದ್ದು. ಇಬ್ಬರೂ ಪದವೀಧರರಾಗಿದ್ದು, ಕಳೆದ ಹಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಮೂಲಗಳ ಪ್ರಕಾರ, ಮೃತ ಸಹೋದರಿಯರು 2014 ರಿಂದಲೂ ದೀರ್ಘಕಾಲದ ಖಿನ್ನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ತಮ್ಮ ಸಾಕು ನಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಸ್ಥಿತಿ ಸುಧಾರಿಸದ ಕಾರಣ ಇಬ್ಬರೂ ತೀವ್ರ ಭಾವನಾತ್ಮಕ ಒತ್ತಡ ಹಾಗೂ ಮನೋವೇದನೆಗೆ ಒಳಗಾಗಿದ್ದರು ಎನ್ನಲಾಗಿದೆ.

ಯಾವುದೇ ಅಹಿತರಕ ಘಟನೆಯನ್ನು ಸಹಿಸಿಕೊಳ್ಳುವಷ್ಟು ಶಕ್ತಿಯುತರಾಗಿರಲಿಲ್ಲ ;

ಸಾಕು ನಾಯಿಯ ಮೇಲಿದ್ದ ಅತಿಯಾದ ಮಮತೆ ಮತ್ತು ಅದರ ನೋವನ್ನು ನೋಡಲಾರದೆ ಅವರು ಸಾವಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಮೃತಪಟ್ಟ ಸಹೋದರಿಯರು. ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತಾಯಿ ಗುಲಾಬ್ ದೇವಿ ಇಬ್ಬರನ್ನು ದಿನಸಿ ತರಲು ಮಾರುಕಟ್ಟೆಗೆ ಕಳುಹಿಸಿದ್ದಾಗ, ಅಂಗಡಿಯಿಂದ ಫಿನೈಲ್ ಖರೀಸಿದ್ದು, ದಾರಿ ಮಧ್ಯೆ ಅದನ್ನು ಸೇವಿಸಿದ್ದಾರೆ. ಮನೆಗೆ ಹಿಂದಿರುಗಿದ ಸಹೋದರಿಯರು ತಾವು ಫಿನೈಲ್ ಸೇವಿಸಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಗೊಂಡ ತಾಯಿ ಕೂಡಲೇ ಮಗನಿಗೆ ಮಾಹಿತಿ ನೀಡಿದ್ದಾರೆ. ಇಬ್ಬರನ್ನು ತಕ್ಷಣವೇ ರಾಣಿ ಲಕ್ಷ್ಮೀಬಾಯಿ ಆಸ್ಪತ್ರೆಗೆ ದಾಖಲಿಸಲಾಯಿತು. ದುರದೃಷ್ಟವಶಾತ್, ರಾಧಾ ಸಿಂಗ್ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮತ್ತೊಬ್ಬ ಸಹೋದರಿ ಜಿಯಾ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ನಂತರ ಸಾವನ್ನಪ್ಪಿದ್ದಾರೆ. ಈ ಘಟನೆ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಸೋದರಿಯರು ಮಾನಸಿಕವಾಗಿ ದುರ್ಬಲವಾಗಿದ್ದು, ಯಾವುದೇ ಅಹಿತರಕ ಘಟನೆಯನ್ನು ಸಹಿಸಿಕೊಳ್ಳುವಷ್ಟು ಶಕ್ತಿಯುತರಾಗಿರಲಿಲ್ಲ. ಅದಕ್ಕಾಗಿ ಮನೆಯಲ್ಲಿ ಈ ತರಹದ ಮಕ್ಕಳಿದ್ದರೆ ಅವರ ಮನಸ್ಥಿತಿಯನ್ನು ಹಿರಿಯರು ಅಥವಾ ಸುತ್ತಮುತ್ತಲ ಜನರು ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ.

Sisters commit suicide over pet dog – ತುಳು ಟೈಮ್ಸ್

ಇದನ್ನೂ ಓದಿ :ಚಿತ್ರದುರ್ಗ ಬಸ್ ಅಗ್ನಿ ದುರಂತಕ್ಕೆ ಮೂಲ ಕಾರಣವಾಯ್ತಾ ಈ ವಸ್ತು ?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page