ಮಕ್ಕಳ ಕಥೆ : Tulu Times | ಒಂದು ಹಳ್ಳಿಯಲ್ಲಿ ರಂಗಣ್ಣ ಎಂಬ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಪುಟ್ಟ ಹಸು ಇತ್ತು. ಅದು ತುಂಬಾ ಚಿಕ್ಕದಾಗಿದ್ದರಿಂದ ಎಲ್ಲರೂ ಅದನ್ನು “ಪುಟಾಣಿ” ಎಂದು ಕರೆಯುತ್ತಿದ್ದರು. ಪುಟಾಣಿ ಹಸು ಬಿಳಿ ಬಣ್ಣದ್ದು ಹಾಗೂ ದೊಡ್ಡ ದೊಡ್ಡ ಕಣ್ಣುಗಳು ಎಲ್ಲರ ಮನಸ್ಸು ಗೆಲ್ಲುತ್ತಿತ್ತು. ಆದರೆ ರೈತ ರಂಗಣ್ಣ ಮಾತ್ರ ಈ ಪುಟಾಣಿ ಹಸುವನ್ನು ತುಂಬಾ ಜೋಪಾನ ಮಾಡುತ್ತಿದ್ದ. ಯಾರಾದ್ರು ಹಸುವಿನ ಬಳಿ ಬಂದ್ರೆ ಆತನಿಗೆ ತುಂಬಾ ಕೋಪ ಬರ್ತಿತ್ತು. ಹಾಗಾಗಿ ಊರ ಜನರಿಗೆ ರಂಗಣ್ಣನ ಮೇಲೆ ಅಸಾಮಾಧಾನ ಇತ್ತು.
ಪ್ರತಿದಿನ ಬೆಳಗ್ಗೆ ರಂಗಣ್ಣ ಹಸುಗೆ ಸ್ನಾನ ಮಾಡಿಸಿ, ಹುಲ್ಲು ತಿನ್ನಿಸುತ್ತಿದ್ದ. ಪುಟಾಣಿ ಹಸು ಹಳ್ಳಿಯ ಮಕ್ಕಳು ಶಾಲೆಗೆ ಹೋಗುವಾಗ ಅವರ ಹಿಂದೆ ಹಿಂದೆ ಓಡುತ್ತಿತ್ತು. ಮಕ್ಕಳು ಅದನ್ನು ಪ್ರೀತಿಯಿಂದ ತಟ್ಟುತ್ತಾ “ಪುಟಾಣಿ, ಪುಟಾಣಿ” ಎಂದು ಕರೆಯುತ್ತಿದ್ದರು. ಹಸು ಕೂಡ ಖುಷಿಯಿಂದ ಬಾಲ ಆಡಿಸುತಿತ್ತು. ಇದೂ ಕೂಡಾ ರಂಗಣ್ಣನಿಗೆ ಇಷ್ಟವಾಗ್ತಾ ಇರ್ಲಿಲ್ಲ. ರಂಗಣ್ಣ ಮಕ್ಕಳಿಗೆ ಜೋರು ಮಾಡಿ ಓಡಿಸ್ತಿದ್ದ. ಪುಟಾಣಿ ಹಸುವಿನ ಬಳಿ ಬರ್ಬೇಡಿ ಅಂತ ಗದರಿಸ್ತಾ ಇದ್ದ.
ಹೀಗಿರುವಾಗ ಒಂದು ದಿನ ಹಳ್ಳಿಗೆ ಭಾರೀ ಮಳೆ ಬಂತು. ನದಿಯ ನೀರು ಹೆಚ್ಚಾಗಿ ಹರಿಯಲಾರಂಭಿಸಿತು. ಹಸು ಮೇಯಲು ಹೋದಾಗ ಅಜಾಗರೂಕತೆಯಿಂದ ನದಿಯ ಹತ್ತಿರ ಹೋಗಿಬಿಟ್ಟಿತು. ನೀರಿನ ಹೊಡೆತದಿಂದ ಅದು ಜಾರಿ ಬಿದ್ದಿತು. ಹಳ್ಳಿಯವರು ಕಂಗಾಲಾದರು. ರಂಗಣ್ಣನ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಭಯದಿಂದ ನಡುಗಿದ ಜೊತೆಗೆ ಜೋರಾಗಿ ‘ಯಾರಾದ್ರೂ ನನ್ನ ಪುಟಾಣಿ ಹಸುವನ್ನು ರಕ್ಷಿಸಿ… ಅಯ್ಯೋ ಕಾಪಾಡಿ… ನನ್ನ ಕಂದಾ’ ಎಂದು ಕೂಗಾಡಿದ. ಅದೇ ಸಮಯದಲ್ಲಿ ಹಳ್ಳಿಯ ಮಕ್ಕಳು, ಯುವಕರು ಧೈರ್ಯ ತೋರಿಸಿದರು. ಮೆಲ್ಲಗೆ ನದಿಗೆ ಇಳಿದು ಪುಟಾಣಿ ಹಸುವನ್ನು ರಕ್ಷಿಸಲು ಮುಂದಾದರು. ಹಸು ಭಯದಿಂದ ಕೂಗುತ್ತಿತ್ತು. ಆದರೆ ಮಕ್ಕಳು ಹಸುವಿಗೆ ಧೈರ್ಯ ತುಂಬಿ ನಿಧಾನವಾಗಿ ನದಿಯಿಂದ ಹೊರತಂದರು. ಪುಟಾಣಿ ಹಸು ಸುರಕ್ಷಿತವಾಗಿ ಹೊರಬಂದಾಗ ಎಲ್ಲರೂ ಸಂತೋಷದಿಂದ ಕೈ ತಟ್ಟಿ ಹರ್ಷಿಸಿದರು. ಆ ದಿನದಿಂದ ಪುಟಾಣಿ ಹಸು ಹಳ್ಳಿಯ ಹೆಮ್ಮೆ ಆಯಿತು. ರಂಗಣ್ಣನ ಅಸೂಯೆ ಓಡಿ ಹೋಯ್ತು. ಪುಟಾಣಿ ಬೆಳೆಯುತ್ತಾ ದೊಡ್ಡ ಹಸುವಾಯಿತು. ಅದರ ಹಾಲು ಹಳ್ಳಿಯ ಮಕ್ಕಳಿಗೆ ಪೌಷ್ಟಿಕ ಆಹಾರವಾಯಿತು. ರಂಗಣ್ಣನ ಕುಟುಂಬಕ್ಕೂ ಅದರಿಂದ ಜೀವನ ಸುಧಾರಿಸಿತು. The story of how Ranganna’s jealousy disappeared due to a small cow – ತುಳು ಟೈಮ್ಸ್
ಇದನ್ನೂ ಓದಿ :ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ: ಡಿ.ಕೆ. ಶಿವಕುಮಾರ್
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=ZnMAz2_LgUHSxqn9











