ಬ್ರೇಕಿಂಗ್ ನ್ಯೂಸ್
ಕ್ರೀಡೆ

ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟದಲ್ಲಿ ಬೆಳ್ತಂಗಡಿಗೆ ಮೊದಲ ಪದಕ

ಕ್ರೀಡೆ : Tulu Times | ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟ ಎನ್ನುವುದು ಭಾರತದಲ್ಲಿನ ವಿವಿಧ ನಾಗರಿಕ ಸೇವೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ಆಯೋಜಿಸಲ್ಪಡುವ ಮಹತ್ವದ ಕ್ರೀಡಾ ಉತ್ಸವವಾಗಿದೆ. ಈ ಕ್ರೀಡಾಕೂಟವು ಕ್ರೀಡೆಗಳ ಮೂಲಕ ಶಾರೀರಿಕ ಸಾಮರ್ಥ್ಯ, ಮಾನಸಿಕ ಶಕ್ತಿ ಹಾಗೂ ಪರಸ್ಪರ ಸಹಕಾರವನ್ನು ಬೆಳೆಸುವ ಉದ್ದೇಶ ಹೊಂದಿದೆ.

ಈ ಬಾರಿಯ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾ ಕೂಟವು ಬಿಹಾರ ಪಾಟ್ನಾದ ಪಾಟಲೀಪುತ್ರ ಕ್ರೀಡಾಂಗಣದಲ್ಲಿ ದಿನಾಂಕ 13.12.2025 ರಿಂದ 15.12.2025 ರವರೆಗೆ ನಡೆಯಿತು. ಇದರಲ್ಲಿ ಸರ್ಕಾರಿ ಪ್ರೌಢಶಾಲೆ ಕಾಶಿಪಟ್ನದ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯ .ಕೆ ಇವರು ನಮ್ಮ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸಿ 400 ಮೀ. ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಇದು ಬೆಳ್ತಂಗಡಿಗೆ ಈ ಕ್ರೀಡಾಕೂಟದ ಅಥ್ಲೆಟಿಕ್ ನಲ್ಲಿ ಮೊದಲ ಪದಕವಾಗಿರುವುದು ವಿಶೇಷ. ಇವರು ಇಂದಬೆಟ್ಟು ಲಕ್ಷ್ಮಣ ಗೌಡ ಹಾಗೂ ಪಾರ್ವತಿ ದಂಪತಿಗಳ ಪುತ್ರಿ

ಪ್ರತಿ ವರ್ಷ ವಿಭಿನ್ನ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಇದರಿಂದ ದೇಶದ ವಿವಿಧ ಭಾಗಗಳ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಭೇಟಿಯಾಗಿ ಸ್ನೇಹ ಮತ್ತು ಸಹಭಾವನೆ ಬೆಳೆಸಿಕೊಳ್ಳುವ ಅವಕಾಶ ದೊರೆಯುತ್ತದೆ. ನಾಗರಿಕ ಸೇವಾ ಅಧಿಕಾರಿಗಳ ದಿನನಿತ್ಯದ ಕೆಲಸ ಬಹಳ ಒತ್ತಡಪೂರ್ಣಕವಾಗಿರುವುದರಿಂದ, ಇಂತಹ ಕ್ರೀಡಾಕೂಟಗಳು ಅವರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಕೆಲಸದ ಒತ್ತಡದಿಂದ ದೂರವಾಗಿ ಮನರಂಜನೆ ಮತ್ತು ಉತ್ಸಾಹವನ್ನು ನೀಡುತ್ತವೆ. ಕ್ರೀಡೆಯ ಮೂಲಕ ದೈಹಿಕ ತಾಕತ್ತು ಹೆಚ್ಚುವುದರೊಂದಿಗೆ ಮಾನಸಿಕ ಸಮತೋಲನ ಸಹ ವೃದ್ಧಿಯಾಗುತ್ತದೆ.

Belthangady wins first medal in All India Civil Services Games – ತುಳು ಟೈಮ್ಸ್

ಇದನ್ನೂ ಓದಿ :ಅಗರಬತ್ತಿ ಬದಲಾಗಿ ಈ ವಸ್ತುವನ್ನು ಬಳಸಿದ್ರೆ ಮನೆಯ ವಾತಾವರಣ ಪರಿಶುದ್ಧವಾಗುತ್ತೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/P32eyH-HgoY?si=WfJ0tXoxf2iwfNLA

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page