ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಾಲ್ಕು ಚೀಲ ಕಸ ಎಸೆದ ವ್ಯಕ್ತಿಗಳು ಐದು ಸಾವಿರ ಕಳೆದುಕೊಂಡರು !

ಬೆಂಗಳೂರು : Tulu Times | ಕಾರಿನಲ್ಲಿ ಬಂದ ವ್ಯಕ್ತಿಗಳು ಕಾರಿನ ಹಿಂಬದಿ ಡೋರ್ ತೆಗೆದು ದೊಡ್ಡ ಚೀಲದಲ್ಲಿ ಕಸಗಳನ್ನು ಬಿಸಾಡುತ್ತಾರೆ. ಜೊತೆಗೆ ಡಿಕ್ಕಿಯಲ್ಲಿಯೂ ಇದ್ದ ಮೂರು ಚೀಲ ಕಸದ ಗೋಣಿಯನ್ನು ಹೊರಗೆ ಹಾಕಿ, ಇದರ ವಿಡಿಯೋವನ್ನು ಬೇರೆ ಸವಾರರೊಬ್ಬ ಮಾಡುತ್ತಿದ್ದರೂ ಇದಕ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣದೆ ಕಾರು ಹತ್ತಿ ಸೀದಾ ಹೋಗುತ್ತಾರೆ. ಇದು ನಡೆದದ್ದು ಬೇರೆಲ್ಲೂ ಅಲ್ಲ, ಕಸ ತುಂಬುತ್ತಿರುವ ಸಿಲಿಕಾನ್ ಸಿಟಿಯಲ್ಲಿ. ಇಲ್ಲಿನ ಜನರಿಗೆ ಅದೆಷ್ಟೋ ಸ್ವಚ್ಚತೆ ಬಗ್ಗೆ, ಕಸ ವಿಲೇವಾರಿ ಬಗ್ಗೆ ಜಾಗೃತಿ ವಹಿಸಿದ್ರೂ ಗಮನಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಬೆಳ್ಳಂಬೆಳಗ್ಗೆ ಬಂದು ಈ ರೀತಿ ರೋಡ್ ಸೈಡ್ ಕಸ ಹಾಕೋದು ಅಂದ್ರೆ ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ಗತ್ತು ತೋರಿಸೋ ಹಾಗಿತ್ತು ಈ ವೀಡಿಯೋ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ 5000 ದಂಡ ಹಾಕಿದ್ದು, ಮತ್ತೆ ಈ ರೀತಿ ಮಾಡದಂತೆ ವಾರ್ನಿಂಗ್ ನೀಡಿದೆ. ಈ ಬಗ್ಗೆ ಕಸ ಸುರಿಯುವವರ ವಿರುದ್ಧ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ದಂಡ ಹೆಚ್ಚಿಲ್ಲದಿದ್ದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ದುಷ್ಟರಿಗೆ 50 ಸಾವಿರ ರೂ. ದಂಡ ವಿಧಿಸಬೇಕಿತ್ತು. ಜೊತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ವಿಡಿಯೋದಲ್ಲಿ ಕಾಣುವ ಇಬ್ಬರು ವ್ಯಕ್ತಿಗಳನ್ನು ಸಹ ಬಂಧಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್​​ ಪೊಲೀಸರ ಸಹಾಯದಿಂದ ಅವರ ಮನೆಯನ್ನು ಪತ್ತೆ ಮಾಡಲಾಗಿದ್ದು, 5 ಸಾವಿರ ರೂ. ದಂಡವನ್ನು ಜಿಬಿಎ ಅಧಿಕಾರಿಗಳು ವಸೂಲಿ ಮಾಡಿದ್ದಾರೆ. ಮನೆಗೆ ಭೇಟಿ ನೀಡಿದ್ದ ಜೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಸಂದೀಪ್ ಮತ್ತು ಇತರೆ ಅಧಿಕಾರಿಗಳು ಫೈನ್​​ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಎಚ್ಚರಿಕೆ ನೀಡಿರೋದಾಗಿ ಜಿಬಿಎ ತಿಳಿಸಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಜನ ಮಾತ್ರ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ. ದಂಡದ ಜೊತೆಗೆ ಕಸ ಎಸೆಯುವವರ ಮನೆ ಮುಂದೆಯೇ ಜಿಬಿಎ ಲೋಡ್​​ಗಟ್ಟಲೆ ಕಸ ಸುರಿದರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುವ ಪ್ರಕರಣಗಳು ನಿಲ್ಲುತ್ತಲೇ ಇಲ್ಲ. ಇದಕ್ಕೆ ಇನ್ನೂ ಕಠಿಣ ಕ್ರಮ ಜಾರಿಗೆ ತಂದರೆ ಜನ ಮತ್ತಾದರೂ ಎಚ್ಚೆತ್ತುಕೊಳ್ಳಬಹುದೇನೋ ಎಂಬ ನಂಬಿಕೆ. People who threw away four bags of garbage lost five thousand! – ತುಳು ಟೈಮ್ಸ್

ಇದನ್ನೂ ಓದಿ :ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಪ್ರಾಂಶುಪಾಲನಿಗೆ ಧರ್ಮದೇಟು

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/TxoTNdzv6vY?si=GPpULgXOoCe0XwYa

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page