ಕರ್ನಾಟಕ: Tulu Times | ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿಯ ಸಮಾಧಿಯನ್ನು ಕಿಡಿಗೇಡಿಗಳು ಚಿತ್ರದುರ್ಗದಲ್ಲಿ ಧ್ವಂಸಗೊಳಿಸಿದ್ದಾರೆ.
ದರ್ಶನ್ ತೂಗುದೀಪ ಅಂಡ್ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. 2024ರ ಜೂನ್ ತಿಂಗಳಿನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಇದೀಗ ಈತ ಸತ್ತ ಮೇಲೂ ನೆಮ್ಮದಿ ಇಲ್ಲದಂತಾಗಿದೆ. ದರ್ಶನ್ ಅಂಡ್ ಗ್ಯಾಂಗ್‌ನಿಂದ ಭೀಕರ ಹೊಡೆತಗಳಿಂದ ಚಿತ್ರಹಿಂಸೆ ಅನುಭವಿಸಿ ಕೊಲೆಗೀಡಾದ ರೇಣುಕಾಸ್ವಾಮಿಯ ಸಮಾಧಿ ಚಿತ್ರದುರ್ಗದಲ್ಲಿತ್ತು. ಇಲ್ಲಿನ ಲಕ್ಷ್ಮೀಪುರ ರುದ್ರಭೂಮಿಯಲ್ಲಿರುವ ರೇಣುಕಾಸ್ವಾಮಿ ಸಮಾಧಿಯ ಮೇಲಿದ್ದ ನಾಮಫಲಕವನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಇನ್ನು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ರೇಣುಕಾಸ್ವಾಮಿ ಕುಟುಂಬಸ್ಥರು ತಿಳಿಸಿದ್ದು, ರುದ್ರಭೂಮಿ ಬಳಿ ಲೇಔಟ್ ನಿರ್ಮಾಣ ಮಾಡುವ ವೇಳೆ ಸಮಾಧಿಗೆ ಧಕ್ಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ 6 ಆರೋಪಿಗಳು!
ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿಯ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದ್ದು, 3,923 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಒಟ್ಟು 6 ಜನರ ವಿರುದ್ಧ ಷಡ್ಯಂತ್ರ ಆರೋಪ ಸಾಬೀತಾಗಿದೆ. ಇಂದು ಸದನದಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿತೇಂದ್ರ ಕುಮಾರ್ ದಯಾಮ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದರು. ಚಿನ್ನಯ, ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ, ವಿಠಲ್ ಗೌಡ ಹಾಗೂ ಸುಜಾತ ಭಟ್ ವಿರುದ್ಧ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಕೆ ಆಗಿತ್ತು. ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿರುವ ಪ್ರಕಾರ ಪ್ರಕರಣದ ಕುರಿತು ಏನೆಲ್ಲ ಆಯ್ತು ಅನ್ನುವುದು, ಮೂಳೆಗಳು ಹಾಗೂ ಇತರೆ ಭಾಗಗಳು ಸಿಕ್ಕಿದ್ದವು.
ಎಸ್‌ಐ ಟಿ ಪ್ರಾಥಮಿಕ ವರದಿಯಲ್ಲಿ, ಚಿನ್ನಯ್ಯ ತಲೆ ಬುರುಡೆಯನ್ನು ತಂದು ಕೊಟ್ಟಿದ್ದು ಯಾರು ? ಷಡ್ಯಂತರ ಮಾಡಲು ಪ್ರೇರಣೆ ಕೊಟ್ಟಿರುವುದು ಯಾರು ? ತಲೆ ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತರ ನಡೆದಿದೆ? ಎಲ್ಲಾ ಷಡ್ಯಂತ್ರಕ್ಕೆ ಹಣವನ್ನು ಫಡಿಂಗ್ ಯಾರು ಎಲ್ಲಿಂದ ಮಾಡಿದರು? ಎನ್ನುವುದು 3923 ಪುಟಗಳ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಣದ ಆಮಿಷಕ್ಕೆ ಚಿನ್ನಯ್ಯಸುಳ್ಳು ಹೇಳಿ, ಹಣ ಪಡೆದು ಬುರುಡೆ ಕಥೆ ಕಟ್ಟಿ, ಚಿನ್ನಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಸಹ ಮಾಡಿದ್ದರು ಎಂದು SIT ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ. ಧರ್ಮಸ್ಥಳದ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಚೆನ್ನಯ್ಯ ಮಹೇಶ ತಿಮ್ಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ ಟಿ ಜಯಂತ, ಹಾಗೂ ಸುಜಾತ ಭಟ್ ಅಪರಾಧ ಕೃತ್ಯದಲ್ಲಿ ಆರು ಆರೋಪಿಗಳು ಶಾಮೀಲಾಗಿರುವುದು ದೃಢಪಟ್ಟಿದೆ.ಇನ್ನು ಈ ಆರೋಪಗಳ ವಿರುದ್ಧ ಧರ್ಮಸ್ಥಳದ ಭಕ್ತರು ಮತ್ತು ವಿವಿಧ ಸಂಘಟನೆಗಳು ವೀರೇಂದ್ರ ಹೆಗ್ಗಡ ಮತ್ತು ದೇವಸ್ಥಾನದ ಆಡಳಿತ ಮಂಡಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಮತ್ತು ಸಭೆಗಳನ್ನು ನಡೆಸಿದರು.
chitradurga-renukaswamy-tomb-vandalized-insult-to-darshan-murder-case-victim- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











