ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಋತುಚಕ್ರದ ರಜೆ ವಿಚಾರವಾಗಿ ಸರ್ಕಾರದ ವಾದ ಕೇಳದೇ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು : Tulu Times | ಮಹಿಳೆಯರ ಆರೈಕೆ ಮತ್ತು ಕೆಲಸದ ಸ್ಥಳದಲ್ಲಿನ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ವರ್ಷಗಳಲ್ಲಿ “ಋತುಚಕ್ರದ ರಜೆ” ಕುರಿತು ಚರ್ಚೆಗಳು ಹೆಚ್ಚು ಜೋರಾಗಿವೆ. ಮಹಿಳೆಯರಲ್ಲಿ ತಿಂಗಳಿಗೊಮ್ಮೆ ಆಗುವ ಋತುಸ್ರಾವವು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದ್ದರೂ, ಕೆಲವರಲ್ಲಿ ಈ ಅವಧಿಯಲ್ಲಿ ತೀವ್ರವಾದ ಹೊಟ್ಟೆನೋವು, ತಲೆ ಸುತ್ತುವುದು, ಒದ್ದಾಟ, ಮನೋಭಾವದ ಬದಲಾವಣೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕುಂದುವುದು ಸಹಜ. ಇದನ್ನು ಗಮನದಲ್ಲಿಟ್ಟುಕೊಂಡೇ ಹಲವು ಸಂಸ್ಥೆಗಳು ಮತ್ತು ರಾಜ್ಯಗಳು ಮಹಿಳೆಯರಿಗೆ ವಿಶೇಷ ರಜೆಯನ್ನು ಒದಗಿಸಲು ಮುಂದಾಗಿವೆ.

ಸರ್ಕಾರದ ಏಕ ಪಕ್ಷೀಯ ಆದೇಶದಿಂದಾಗಿ ಹೋಟೆಲ್ ಗಳಿಗೆ ಸಮಸ್ಯೆಯಾಗುತ್ತದೆ ;

ಆದರೆ ಹೊಸ ಸಮಸ್ಯೆಯೊಂದನ್ನು ಎದುರಿಸುತ್ತಿರುವ ಕೋರ್ಟ್ ಇದೀಗ ನವೆಂಬರ್ 20 ರಂದು ಒಂದು ದಿನದ ಋತುಚಕ್ರದ ರಜೆ ಸಂಬಂಧ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅರ್ಜಿಯನ್ನ ಸಲ್ಲಿಸಿದ್ದು ಕಾಯ್ದೆಯಲ್ಲಿ ಇಲ್ಲದ ಈ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೆ ತರಲಾಗಿದೆ. ಸರ್ಕಾರದ ಏಕ ಪಕ್ಷೀಯ ಆದೇಶದಿಂದಾಗಿ ಹೋಟೆಲ್ ಗಳಿಗೆ ಸಮಸ್ಯೆಯಾಗುತ್ತದೆ ಎಂದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ ವಿಚಾರಣೆಯನ್ನು ಮುಂದೂಡಲಾಗಿದೆ. ನಾಳೆ ಹೈಕೋರ್ಟ್ ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಇದರ ಜೊತೆ ಇತರ ಸಂಸ್ಥೆಗಳೊಂದಿಗೆ ಋತುಚಕ್ರದ ಬಗ್ಗೆ ಅಭಿಪ್ರಾಯಗಳನ್ನು ಕೇಳಿಲ್ಲ ಎನ್ನುವುದೂ ಇನ್ನೊಂದೆಡೆ ಪ್ರಶ್ನೆಗೆ ಕಾರಣವಾಗಿದೆ.

ಋತುಚಕ್ರದ ರಜೆ ಆದೇಶಕ್ಕೆ ಮುನ್ನ ಸರ್ಕಾರ ಕಾನೂನು ಪಾಲಿಸಿದೆ. ಈ ಸಲುವಾಗಿ ಋತುಚಕ್ರದ ರಜೆ ವಿಚಾರವಾಗಿ ಸರ್ಕಾರದ ವಾದ ಕೇಳದೇ ಹೈಕೋರ್ಟ್ ತಡೆಯಾಜ್ಞೆ ನೀಡಿರುತ್ತದೆ. ಈ ಕಾರಣ, ಹೈಕೋರ್ಟ್ ತಡೆ ತೆರವು ಕೋರಿ, ಆದೇಶವನ್ನು ಮಾರ್ಪಾಡಿಸಲು ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದ್ದರು. ಆದರೆ ಈಗ ಸರ್ಕಾರದ ವಾದ ಆಲಿಸಿದ ಬಳಿಕವೇ ಅರ್ಜಿ ಬಗ್ಗೆ ಆದೇಶ ನೀಡಲಾಗುವುದು. ಸದ್ಯ ಸರ್ಕಾರದ ಋತುಚಕ್ರದ ಆದೇಶಕ್ಕೆ ಯಾವುದೇ ತಡೆ ಇರುವುದಿಲ್ಲ.
ಸರ್ಕಾರದ ಋತುಚಕ್ರದ ಆದೇಶಕ್ಕೆ ಹೈಕೋರ್ಟ್ ತಡೆ ಇಲ್ಲ ಎಂಬುದನ್ನು ಇಲ್ಲಿ ಸ್ಪಷ್ಟೀಕರಿಸಲಾಗಿದೆ. High Court stays order without hearing government’s arguments on menstrual leave issue – ತುಳು ಟೈಮ್ಸ್

ಇದನ್ನೂ ಓದಿ :ವೈದ್ಯರಿಗೆ ವೃತ್ತಿ ಪ್ರಮಾಣ ಪತ್ರ ಕಡ್ಡಾಯ..ನಕಲಿ ಡಾಕ್ಟರ್ಸ್‌ಗಳ ಕಡಿವಾಣಕ್ಕೆ ಸರ್ಕಾರ ಚಿಂತನೆ

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page