ಲೋಕಸಭೆ : Tulu Times | ವಂದೇ ಮಾತರಂ ಗೀತೆಯ 150 ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ, ಲೋಕಸಭೆಯಲ್ಲಿ ವಂದೇ ಮಾತರಂ ಚರ್ಚೆಗೆ 10 ಗಂಟೆಯನ್ನು ಮೀಸಲಿಡಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣವನ್ನು ಮಾಡುತ್ತಿದ್ದು, ಬ್ರಿಟಿಷರು ಕೂಡಾ ವಂದೇ ಮಾತರಂ ಗೀತೆಯನ್ನು ಬಳಕೆ ಮಾಡಿದ್ರು, ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತ್ತು. ಈ ಗೀತೆಗೆ ಇಡೀ ದೇಶವೇ ಸ್ವಾತಂತ್ರ್ಯವಾಯಿತು ಹಾಗೂ ಐತಿಹಾಸಿಕ ಸಂದರ್ಭದಲ್ಲಿ ಇದಕ್ಕೆ ಸಾಕ್ಷಿ ಆಗುತ್ತಿರುವುದು ಹೆಮ್ಮೆಯ ವಿಚಾರ. ವಂದೇ ಮಾತರಂ ಗೀತೆ ಮುಂದಿನ ಪೀಳಿಗೆಗೂ ಮಾದರಿಯಾಗಿದೆ. ಈ ಗೀತೆಯಲ್ಲಿ ದೊಡ್ಡ ಶಕ್ತಿಯೇ ಅಡಗಿದೆ ಎಂದು ಹೇಳಿದರು.
ವಂದೇ ಮಾತರಂ ಗೀತೆ ಕೀಳರಿಮೆಯನ್ನು ಕಡಿಮೆ ಮಾಡಿದೆ. ಈ ಗೀತೆಯು ದುಷ್ಟರಿಗೆ ನಡುಕ ಹುಟ್ಟುವಂತೆ ಮಾಡಿದೆ. ಅಲ್ಲದೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆ ಮೊಳಗಿದ್ದು, ಇದು ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕ್ರಾಂತಿಕಾರರು ಧೈರ್ಯ ಪಡೆಯಲು ಇದನ್ನು ಮಂತ್ರದಂತೆ ಜಪಿಸುತ್ತಿದ್ದರು ;
ವಂದೇ ಮಾತರಂನ್ನು ಪ್ರಸಿದ್ಧ ಸಾಹಿತಿ ಬಂಕಿಂಚಂದ್ರ ಚಟ್ಟೋಪಾಧ್ಯಾಯ ಅವರು 1882ರಲ್ಲಿ ತಮ್ಮ ‘ಆನಂದಮಠ’ ಕಾದಂಬರಿಯೊಳಗೆ ರಚಿಸಿದರು. ಇದರಲ್ಲಿ ಪ್ರತೀ ಕಾವ್ಯಪಂಕ್ತಿಗಳು ದೇಶಮಾತೆಯ ಸೌಂದರ್ಯ, ಸಾಮರ್ಥ್ಯ ಮತ್ತು ಮಹಿಮೆಗಳನ್ನು ವರ್ಣಿಸುತ್ತದೆ. ಸ್ವಾತಂತ್ರ್ಯಸಮರದ ಕಾಲದಲ್ಲಿ “ವಂದೇ ಮಾತರಂ” ಜನರಿಗೆ ಪ್ರೇರಣೆಯ ಜ್ವಾಲೆಯಾಗಿತ್ತು. ಪ್ರತಿಭಟನೆಗಳು, ಸಭೆಗಳು, ಮೆರವಣಿಗೆಗಳಲ್ಲಿ ಈ ಘೋಷವಾಕ್ಯ ಮೊಳಗುತ್ತಿತ್ತು. ಕ್ರಾಂತಿಕಾರರು ಧೈರ್ಯ ಪಡೆಯಲು ಇದನ್ನು ಮಂತ್ರದಂತೆ ಜಪಿಸುತ್ತಿದ್ದರು ಹಾಗೂ ಬ್ರಿಟಿಷರು ಈ ಘೋಷವಾಕ್ಯವನ್ನು ನಿಷೇಧಿಸಿದಷ್ಟೂ, ಜನರು ಅದನ್ನು ಇನ್ನೂ ಹೆಚ್ಚಿನ ಆತುರದಿಂದ ಕೂಗಿದರು. 10 hours reserved for Vande Mataram debate in Lok Sabha – ತುಳು ಟೈಮ್ಸ್
ಇದನ್ನೂ ಓದಿ :ದರ್ಶನ್ ಜೈಲಿನಲ್ಲಿ ಸಹ ಖೈದಿಗಳಿಗೆ ಕಿರುಕುಳ ಕೊಡ್ತಿದ್ದಾರಾ..?
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/bVV7PCunwKI?si=-ARE59rh7pfpy5-Q











