ಕರ್ನಾಟಕ: Tulu Times | ಕರ್ನಾಟಕ ರಾಜ್ಯಾದ್ಯಂತ ಹೆಚ್ಚಿನ ಚಳಿ ಮುನ್ಸೂಚನೆಯಿದ್ದು, ಕರಾವಳಿಯಲ್ಲಿ ತೀವ್ರ ತಾಪಮಾನ ಸೃಷ್ಟಿಯಾಗಿದೆ. ಇನ್ನು ಬಿಸಿಲು ಅಧಿಕವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಮೈಕೊರೆವ ಚಳಿ ಉಂಟಾಗಿದೆ.
ಇದನ್ನೂ ಓದಿ: ಮನಸ್ಥಿತಿ ಸುಧಾರಿಸೋದಿಕ್ಕೆ ಹೀಗೊಂದು ದಾರಿ !
ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಆವರಿಸಿದೆ. ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಕಡಿಮೆಯಾದ ಬೆನ್ನಲ್ಲೆ ಚಳಿ ಆವರಿಸಿಕೊಂಡಿದ್ದು, ಕರಾವಳಿ ಭಾಗದಲ್ಲಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಕೆಲವು ದಿನಗಳ ಹಿಂದೆ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಇದೀಗ ತಾಪಮಾನ ಹೆಚ್ಚಾಗಿ ಮೈಕೊರೆವ ಚಳಿ ಶುರುವಾಗಿದೆ. ಬೆಳಗ್ಗೆ ಮಂಜು, ಚಳಿ ಆವರಿಸಿದೆ. ಬೆಂಗಳೂರಿನಲ್ಲೂ ಅಧಿಕ ಚಳಿ ಮುಂದುವರಿವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮಿಟ್ಟಿ ಬೆಕ್ಕಿನ ಮಾಯಾ ಸಾಹಸ : ಮಕ್ಕಳ ವಾರದ ಕಥೆ
ಕರಾವಳಿಯಲ್ಲಿ ರಾಜ್ಯದಲ್ಲಿ ಅತ್ಯಧಿಕ ತಾಪಮಾನವಿದ್ದು, ಬೆಳಗ್ಗೆ, ರಾತ್ರಿ ಚಳಿ ಕಂಡು ಬರುತ್ತಿದ್ದು, ಕಾರವಾರದಲ್ಲಿ 35 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34.9 ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣ 32 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 33 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32.5 ಡಿಗ್ರಿ ಸೆಲ್ಸಿಯಸ್, ಹಾವೇರಿ 30ಡಿಗ್ರಿ ಸೆಲ್ಸಿಯಸ್, ವಿಜಯಪುರ 30 ಡಿಗ್ರಿ ಸೆಲ್ಸಿಯಸ್, ರಾಯಚೂರು 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದನ್ನೂ ಓದಿ: ವಾಲ್ನಟ್ ನ್ನು ಈ ಸಮಯದಲ್ಲಿ ಸೇವಿಸಿದರೆ ಬಹಳ ಉತ್ತಮ…!
ನಗರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಇಂದಿನ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾಣ ಪ್ರಮಾಣ , ಚಳಿ ಪ್ರಮಾಣ ಹೆಚ್ಚಾಗಬಹುದೆಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ನಿಮ್ಮ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರಾ..? ಸಿಂಪಲ್ ಹೀಗೆ ಮಾಡಿ ಸಾಕು!
Cold wave grips entire state; temperatures rise on coast- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











