ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ನಟ ಪವನ್ ಕಲ್ಯಾಣ್ ಗೆ ಅಭಿನವ ಕೃಷ್ಣದೇವರಾಯ ಬಿರುದು ಪ್ರದಾನ

ಉಡುಪಿ: Tulu Times | ಉಡುಪಿಯಲ್ಲಿ ಕೃಷ್ಣ ಮಠದಲ್ಲಿ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರಿಗೆ ಅಭಿನವ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ವೇಳೆ ಮಾತನಾಡಿದ  ನಟ ಪವನ್ ಕಲ್ಯಾಣ್, ಈ ಪವಿತ್ರ ಭೂಮಿ ಒಂದು ಕೋಟಿ ಕೈಬರಹದ ಭಗವದ್ಗೀತೆ ಯೋಜನೆಯಿಂದ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಆಧ್ಯಾತ್ಮಿಕ ಚಲನೆಗಳಿಗೆ ಸಾಕ್ಷಿಯಾಗುತ್ತಿದೆ. ಗೀತೆಯ ಸಂದೇಶವು ನಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡಲಿ, ನಮ್ಮ ಸಮಾಜವನ್ನು ಬಲಪಡಿಸಲಿ ಎಂದರು. ಇನ್ನು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಮಾತನಾಡಿ, ಸನಾತನ ಧರ್ಮ ರಕ್ಷಣೆಗೆ ಪವನ್ ಕಲ್ಯಾಣ್ ಶ್ರಮ ಶ್ಲಾಘನೀಯ. ಹಾಗಾಗಿ ಪವನ್ ಕಲ್ಯಾಣ್ ಅವರಿಗೆ ಈ ಬಿರುದು ನೀಡುತ್ತಿದ್ದೇವೆ ಎಂದರು.

ಪವನ್ ಕಲ್ಯಾಣ್  ವಿಶೇಷ ವಿಮಾನದ ಮೂಲಕ  ಮಂಗಳೂರಿಗೆ ಆಗಮಿಸಿ ಉಡುಪಿಗೆ ಬಂದು ಇಳಿದಿದ್ದಾರೆ.  ಗೀತೋತ್ಸವ ಕಾರ್ಯಕ್ರಮವನ್ನು ತಿಂಗಳ ಹಿಂದೆ ಪೇಜಾವರ ಸ್ವಾಮೀಜಿ ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದು ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ  ಪವನ್ ಕಲ್ಯಾಣ್ ಅತಿಥಿಯಾಗಿ ಭಾಗಿಯಾಗಿದ್ದಾರೆ. ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಕೃಷ್ಣ ಮಠಕ್ಕೆ ತೆರಳಿ, ದೇವರ ದರ್ಶನ ಮಾಡಿ ಸ್ವಾಮೀಜಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಮಠದ ರಾಜಾಂಗಣದಲ್ಲಿ  ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ನೀರುದೋಸೆ, ಮಶ್ರೂಮ್ ಗೀ ರೋಸ್ಟ್, ‌ಪತ್ರೊಡೆ, ಶ್ಯಾವಿಗೆ, ಪನ್ನೀರ್ ಲಬಾಬ್ದಾರ್, ರೋಟಿ, ಗೀ ರೈಸ್, ದಾಲ್ ವೆರೋವಲಿ, ಪಾಯಸ, ಪುಲ್ಕ ವಿದ್ ಪನ್ನೀರ್ ಮಿಂಟ್ ಚಿಲ್ಲಿ, ಅನ್ನ, ಉಡುಪಿ ರಸಂ, ರಾಗಿ ಮಣ್ಣಿಗಳನ್ನು ಪವನ್‌ ಕಲ್ಯಾಣ್‌ ಗೋಸ್ಕರ ಸಿದ್ಧಪಡಿಸಲಾಗಿದೆ.

pawan-kalyan-visit-udupi-sri-krishna-mutt- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 140

You cannot copy content of this page